ವೀರಾಜಪೇಟೆ, ಏ. ೧೭: ವೀರಾಜಪೇಟೆ ವಕೀಲರ ಸಂಘದಿAದ ಇತ್ತೀಚೆಗೆ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡುತ್ತಾ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಧಾನ್ಯತೆ ಪಡೆಯುವಂತಾಗಬೇಕು. ಆ ಮೂಲಕ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಸಮಾಜದ ಸ್ಪಂದನ ಬೇಕು ಎಂದು ಅಭಿಪ್ರಾಯಪಟ್ಟರು.

ವಿಶೇಷ ಆಹ್ವಾನಿತರಾಗಿದ್ದ ಹಿರಿಯ ವಕೀಲ ಸಿ.ಎಸ್. ಮಾಚಯ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಿದರು.

ಹಿರಿಯ ವಕೀಲ ಎನ್.ಜಿ. ಕಾಮತ್ ಹಾಗೂ ಬಿ.ಎನ್. ತಿಮ್ಮಯ್ಯ ಮಾತನಾಡಿದರು. ಕಾರ್ಯಕ್ರಮವನ್ನು ತಮ್ಮ ರೆಸಾರ್ಟಿನಲ್ಲಿ ಆಯೋಜನೆ ಮಾಡಿದ್ದ ವಕೀಲ ಪ್ರಶಾಂತ್ ಚಿನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಭಿನಂದನಾ ಸಮಾರಂಭದಲ್ಲಿ ಮೈಸೂರು ವಿ.ವಿ ಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಕೆ.ಜಿ ವೀಣಾ, ರಾಷ್ಟಿçÃಯ ಹಾಕಿ ಜೂನಿಯರ್ ಶಿಬಿರಕ್ಕೆ ಆಯ್ಕೆಯಾದ ಭವಿನ್ ಕುಶಾಲಪ್ಪ, ಸರ್ಕಾರಿ ವಕೀಲರಾಗಿ ಆಯ್ಕೆಯಾಗಿರುವ ಸಿ.ಬಿ ಅನಿತಾ, ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಎನ್. ಅಮೃತ್ ಸೋಮಯ್ಯ ಇವರುಗಳನ್ನು ವೀರಾಜಪೇಟೆ ವಕೀಲರ ಸಂಘದಿAದ ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕೆ.ಎಸ್ ಅಯ್ಯಪ್ಪ ವಿರಚಿತ ಕೊಡವ ಭಾಷೆಯ ಪುಸ್ತಕವಾದ ಕುಂಬೇರ ಕಕ್ಕುಳಿ ಪುಸ್ತಕವನ್ನು ಪರಿಚಯಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ. ದಿನೇಶ್ ಸ್ವಾಗತಿಸಿದರು, ವಕೀಲ ಅನುಪಮ ಕಿಶೋರ್ ಪ್ರಾರ್ಥಿಸಿದರು, ಸಂಘದ ಜಂಟಿ ಕಾರ್ಯದರ್ಶಿ ವಿ.ಎಸ್. ಪ್ರೀತಮ್ ವಂದಿಸಿದರು.