ಮಡಿಕೇರಿ, ಏ. ೧೭: ವಿದ್ಯಾರ್ಥಿ ದಿಸೆಯಿಂದಲೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗುರಿ ಸಾಧಿಸಬೇಕೆಂದು ಅಂರ‍್ರಾಷ್ಟಿçÃಯ ಕ್ರೀಡಾಪಟು ವಿನೋದ್ ಚಿಣ್ಣಪ್ಪ ಕರೆ ನೀಡಿದರು.

ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಾಂಡರ‍್ಸ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ಮರಣಾರ್ಥ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು. ಶಿಬಿರದಲ್ಲಿ ಕಲಿಸುವದನ್ನು ಕರಗತ ಮಾಡಿಕೊಂಡು ಸಾಧನೆ ಮಾಡಬೇಕು, ನಿಮಗಳಿಗಾಗಿ ಸಂಘಟಕರು ಆಯೋಜನೆ ಮಾಡಿರುವ ಇಂತಹ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಆರಂಭದಿAದಲೇ ಶಿಬಿರದಲ್ಲಿ ಭಾಗವಹಿಸಿ, ಕಲಿತು ಹಾಕಿ ಆಟಗಾರ್ತಿಯಾಗಿ ಆಡಿ, ಇದುವರೆಗೆ ಶಿಬಿರದ ಮಕ್ಕಳಿಗೂ ಕಲಿಸುತ್ತಾ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್‌ಸಿ ಪೂರ್ಣಗೊಳಿಸಿ, ಇದೀಗ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ತೆರಳುತ್ತಿರುವ ಚೇನಂಡ ಜೆಶ್ಮಿ ಕಾವೇರಮ್ಮಳಿಗೆ ವಾಂಡರ‍್ಸ್ ವತಿಯಿಂದ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು. ತಾನು ಮೂರನೇ ತರಗತಿಯಿಂದ ನಿರಂತರವಾಗಿ ಶಿಬಿರದಲ್ಲಿ ಪಾಲ್ಗೊಂಡು ಸಾಕಷ್ಟು ಕಲಿತದ್ದು ಶಾಲಾ ಜೀವನದಲ್ಲಿ, ಎನ್‌ಸಿಸಿಯಲ್ಲಿ ಉಪಯೋಗಕ್ಕೆ ಬಂದಿತೆAದು ಹೇಳಿದ ಜೆಶ್ಮಿ, ಎಲ್ಲರೂ ಚೆನ್ನಾಗಿ ಕಲಿತು ಮುಂದೆ ಬರುವಂತೆ ಹೇಳಿದಳು.

ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಕಾರ್ಯದರ್ಶಿ ಬಾಬು ಸೋಮಯ್ಯ, ಶಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್, ಅಶೋಕ್, ಕೋಟೇರ ನಾಣಯ್ಯ ಇದ್ದರು.