ಮಡಿಕೇರಿ, ಏ. ೧೭: ಮಂಗಳೂರು ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಕೆ.ಎಸ್.ಎ. ಹಾಕಿ ಪಂದ್ಯಾಟ ಮಾ. ೨೬ರಂದು ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ೮ ತಂಡಗಳು ಭಾಗವಹಿಸಿದ್ದವು. ‘ಟೀಮ್ ಭಗವತಿ’ ತಂಡವು ಪಂದ್ಯಾಟದಲ್ಲಿ ಜಯಗಳಿಸಿತು. ರನ್ನರ್ ಅಪ್ ಸ್ಥಾನಕ್ಕೆ ಟೀಮ್ ಕೊಡವಾಮೆ ತಂಡ ತೃಪ್ತಿಪಟ್ಟುಕೊಂಡಿತು.

ಕೆ.ಎಸ್.ಎ. ಸಲಹೆಗಾರರಾದ ಸೋಮೆಯಂಡ ಜೀವನ್ ಚಂಗಪ್ಪ ಮತ್ತು ಬಟ್ಟೀರ ಅಜಿತ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಎಸ್.ಎ. ಕೋರ್ ಕಮಿಟಿ ಮತ್ತು ಸದಸ್ಯರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.