ವೀರಾಜಪೇಟೆ, ಏ. ೧೭: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ಅಚರಿಸಲಾಯಿತು. ಶ್ರೀ ಮೂರ್ತಿ ದೇವನೊಂದಿಗೆ ಕಾನನದೊಳಗೆ ಸ್ಥಿತವಾದ ಶ್ರೀ ಪನ್ನಂಗಾಲ ದೇವಿಯ ಉತ್ಸವ ಆಚರಣೆಯಲ್ಲಿ ಪವಿತ್ರವಾದ ಕೊಡೆ ಬರುವುದು, ಎತ್ತುಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ದೇಗುಲದಲ್ಲಿ ದೇವಿಯ ಉತ್ಸವ ಮೂರ್ತಿಯೊಂದಿಗೆ ದೇಗುಲದ ಪ್ರದಕ್ಷಿಣೆ ಬಂದು ನೆರೆದಿರುವ ಭಕ್ತರಿಗೆ ಶ್ರೀರಕ್ಷೆಯನ್ನು ಕರುಣಿಸಿತು.

ದೇಗುಲದ ತಕ್ಕ ಮುಖ್ಯಸ್ಥರಾದ ಬಾಚೀರ ಉತ್ತಪ್ಪ, ಬಲ್ಟಿಕಾಳಂಡ ಉತ್ತಯ್ಯ, ಶಕ್ತಿ ಕೇಂದ್ರದ ಪ್ರಮುಖರಾದ ಸೋಮಯಂಡ ರೇಶಾ ತಿಮ್ಮಯ್ಯ, ಬಾಚೀರ ಕುಟುಂಬಸ್ಥರು, ಬಲ್ಟಿಕಾಳಂಡ ಕುಟುಂಭಸ್ಥರು, ಗ್ರಾಮನಿವಾಸಿಗಳು, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಉತ್ಸವದಲ್ಲಿ ಭಾಗಿಗಳಾಗಿ ದೇವಿಯ ದರ್ಶನ ಪಡೆದರು.