ನಾಪೋಕ್ಲು, ಏ. ೧೭: ಸಮೀಪದ ಮೂಟೇರಿ ಶ್ರೀ ಭಗವತಿ (ಉಮಾಮಹೇಶ್ವರಿ) ದೇವಳದಲ್ಲಿ ಏ. ೧೫ರಿಂದ ಆರಂಭಗೊAಡ ನೂತನ ದೇವಳದ ಪುನಃ ಪ್ರತಿಷ್ಟೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ನೀಲೇಶ್ವರ ಶ್ರೀ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ಸಾರಥ್ಯದಲ್ಲಿ ಸಂಪನ್ನಗೊAಡಿತು.

ಕಾರ್ಯಕ್ರಮದಲ್ಲಿ ತಾ. ೧೫ ರಂದು ಸಂಜೆ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ ನಡೆಯಿತು. ೧೬ ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಾಶಾಭಿಷೇಕ, ಅನುಜ್ಞಾ ಪಲರಪೂಜೆ, ದ್ವಾರ ಪ್ರಾಯಶ್ಚಿತ ಹೋಮ. ಶಯ್ಯಾ ಪೂಜೆ, ಅನುಜ್ಞಾ ಕಲಶಾಭಿಷೇಕ. ಅನುಜ್ಞಾ ಪ್ರಾರ್ಥನೆ, ಜೀರ್ಣೋದ್ಧಾರ, ಜೀವಕಲಶ ಶಯ್ಯಾಗಮನ ಶಯನ, ಸಂಜೆ ಅಧಿವಾಸ ಹೋಮ, ಕುಂಭೇಶ ಕರ್ಕರಿ ಕಲಶ ಪೂಜೆ, ಧ್ಯಾನಾಧಿವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ನಡೆಯಿತು. ೧೭ರಂದು ಬೆಳಿಗ್ಗೆ ಗಣಪತಿ ಹೋಮ, ೮.೧೫ ರಿಂದ ೯.೫೦ರ ವೃಷಭ ಲಗ್ನದಲ್ಲಿ ದೇವರ ಪುನಃ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪರಿಕಲಶಾಭಿಷೇಕ, ಬ್ರಹ್ಮಕಲ ಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಯೊಂದಿಗೆ ದೈವಿಕ ಕಾರ್ಯಕ್ರಮಗಳು ಸಂಪನ್ನ ಗೊಂಡವು.

ಧಾರ್ಮಿಕ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಮುಖರಾದ ಎ.ಎಸ್. ಪೊನ್ನಣ್ಣ, ಚಂದ್ರಮೌಳಿ ಮತ್ತಿತರರು ಪಾಲ್ಗೊಂಡಿದ್ದರು.