ಸೋಮವಾರಪೇಟೆ, ಏ. ೧೭: ಸಮೀಪದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿ ರುವ ನಗರಳ್ಳಿ ಸುಗ್ಗಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದ್ದು, ತಾ. ೨೫ರಂದು ನಗರಳ್ಳಿಯಲ್ಲಿ ದೊಡ್ಡಸುಗ್ಗಿ ನಡೆಯಲಿದೆ.
ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಶ್ರೀ ಸಬ್ಬಮ್ಮ ದೇವಿ ಹಾಗೂ ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ಗ್ರಾಮದ ಪ್ರಮುಖರು ಚಾಲನೆ ನೀಡಿದ್ದಾರೆ. ೧೨ ªಷÀðಕ್ಕೊಮ್ಮೆ ನಡೆಯುವ ಹೆಣ್ಮಕ್ಕಳ ಸುಗ್ಗಿ ಉತ್ಸವವು ಈ ಬಾರಿಯ ವಿಶೇಷ. ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ದೇವಿಯ ತವರೂರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು.
ಅನಾದಿಕಾಲದಿಂದಲೂ ನಡೆದುಕೊಂಡು ಬಂದAತೆ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದು ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರಮುಖ ಸುಗ್ಗಿ ಆಚರಣೆಯು ತಾ. ೨೫ ರಂದು ನಗರಳ್ಳಿ ಗ್ರಾಮದ ಸುಗ್ಗಿ ಕಟ್ಟೆ ಹಾಗೂ ೧೨ ದೇವರ ಬನದಲ್ಲಿ ವಿವಿಧ ಆಚರಣೆಗಳೊಂದಿಗೆ ನಡೆಯಲಿದೆ. ಇದರೊಂದಿಗೆ ೧೨ ವರ್ಷಕ್ಕೊಮ್ಮೆ ನಡೆಯುವ ಹೆಣ್ಮಕ್ಕಳ ಸುಗ್ಗಿ ಉತ್ಸವವು ಈ ಬಾರಿ ನಡೆಯುತ್ತಿರುವುದು ವಿಶೇಷವಾಗಿದೆ.
ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಿದ ಸಂದರ್ಭ ಕೂತಿನಾಡು ಶ್ರೀ ಸಬ್ಬಮ್ಮ ದೇವಿ ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕೂತಿ ಗ್ರಾಮದ ಅಧ್ಯಕ್ಷ ಹೆಚ್.ಡಿ. ಮೋಹನ್. ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗ್ರಾಮದ ಪಟೇಲರಾದ ಬಸವರಾಜು, ಅರ್ಚಕರುಗಳಾದ ಅನಂತ್ ರಾಮ್, ವಾದಿರಾಜ್, ಪ್ರಮುಖರಾದ ಕೆ.ಟಿ. ಪರಮೇಶ್, ಸಂಜು, ಗಣೇಶ್, ದಿನೇಶ್, ಕುಟ್ಟಪ್ಪ, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.