ಮಡಿಕೇರಿ, ಏ. ೧೭: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರದ ವತಿಯಿಂದ ವಿಶ್ವ ಧ್ವನಿ ದಿನಾಚರಣೆ ಪ್ರಯುಕ್ತ ವೃತ್ತಿ ಪರಧ್ವನಿ ಬಳಕೆದಾರರಿಗೆ ಧ್ವನಿಯ ರಕ್ಷಣೆ ಹಾಗೂ ಸಲಹೆಗಳನ್ನು ನೀಡಲು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ ಬ್ಲಾಕ್‌ನ ಉಪನ್ಯಾಸ ಕೊಠಡಿಯಲ್ಲಿ ತಾ. ೧೮ ರಂದು (ಇಂದು) ಮಧ್ಯಾಹ್ನ ೩ ಗಂಟೆಯಿAದ ೪ ಗಂಟೆಯವರೆಗೆ ಲೈವ್ ವೆಬಿನಾರ್ ನಡೆಯಲಿದೆ.

ಸಂಗೀತಗಾರರು, ಶಿಕ್ಷಕರು ಹಾಗೂ ಧ್ವನಿಯನ್ನು ಹೆಚ್ಚಾಗಿ ಬಳಸುವವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಡಾ. ಶ್ವೇತಾ ೯೫೩೫೬೫೯೨೯೮, ಆನ್‌ಶಭಾ ೭೯೦೭೧೭೭೯೭೧ ಅವರನ್ನು ಸಂಪರ್ಕಿಸಬಹುದು.