ಗೋಣಿಕೊಪ್ಪಲು, ಏ.೧೭: ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಪೊನ್ನಿಮನೆ ಅಯ್ಯಪ್ಪ ಬೋಟೆ ಚಾಮುಂಡಿ ವಾರ್ಷಿಕ ತೆರೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ರಾತ್ರಿ ಜೋಡಿ ತೆರೆ ಸೇರಿದಂತೆ ವಿವಿಧ ತೆರೆಗಳು ನಡೆಯಿತು. ಬೋಟೆ ಚಾಮುಂಡಿ ತೆರೆ, ವಿಷ್ಣು ಮೂರ್ತಿ, ತೆರೆಯೊಂದಿಗೆ ಮಹೋತ್ಸವ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ ಸುತ್ತಮುತ್ತಲಿನ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಅನುಗ್ರಹ ಪಡೆದು ಪುನೀತರಾದರು. ಹಾಗೂ ಭಕ್ತಾದಿಗಳು ದೇವರಿಗೆ ಹರಕೆ ಕಾಣಿಕೆಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಪ್ರಸಾದ ವಿನಿಯೋಗ ನಡೆಯಿತು.