ಮಡಿಕೇರಿ, ಏ. ೧೬ :ಜಾಲಿ ರೈಡ್ ನೆಪದಲ್ಲಿ ಅಪಾಯಕಾರಿ ಪ್ರಯಾಣ ನಡೆಸುತ್ತಿದ್ದ ಪ್ರವಾಸಿಗರನ್ನು ತಡೆದ ಮಾಧ್ಯಮ ಸ್ಪಂದನ ತಂಡದ ಸದಸ್ಯರು ಬುದ್ಧಿ ಹೇಳಿರುವ ಘಟನೆ ಮಡಿಕೇರಿ ಹೊರವಲಯದಲ್ಲಿ ನಡೆದಿದೆ. ಮಾಧ್ಯಮ ಸ್ಪಂದನದ ಸದಸ್ಯರಾದ ಮಂದನೆರವAಡ ಯುಗ ದೇವಯ್ಯ ಹಾಗೂ ಕುಡಿಯರ ದಿವಾಕರ್ ಕರ್ತವ್ಯ ಮುಗಿಸಿ ಗಾಳಿಬೀಡು ರಸ್ತೆಯ ಮೂಲಕ ನಗರಕ್ಕೆ ಮರಳುತ್ತಿದ್ದರು. ಈ ವೇಳೆ ವೇಗವಾಗಿ ಸಾಗುತ್ತಿದ್ದ ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ವಾಹನದ ರೂಫ್‌ನ ಮೇಲೆ ೮ಕ್ಕೂ ಹೆಚ್ಚು ಮಂದಿ ಅಪಾಯಕಾರಿ ಸ್ಥಿತಿಯಲ್ಲಿ ಕುಳಿತಿರುವುದನ್ನು ಇಬ್ಬರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಇವರು ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ಹಿಂಬಾಲಿಸಿ ನಿಲ್ಲಿಸಿದ್ದಾರೆ. ಸಮೀಪದಿಂದ ಗಮನಿಸಿದಾಗ ವಾಹನದ ಮೇಲೆ ಹೆಚ್ಚಾಗಿ ಸಣ್ಣ ಮಕ್ಕಳೇ ಕುಳಿತ್ತಿದ್ದದು ಕಂಡುಬAದಿದೆ. ಬಳಿಕ, ವಾಹನ ಚಾಲಕ ಹಾಗೂ ಒಳಗೆ ಕುಳಿತ್ತಿದ್ದ ಪೋಷಕರಿಗೆ ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ.