ಮಡಿಕೇರಿ ಏ. ೧೬: ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ೧೩೨ನೇ ವಾರ್ಷಿಕೋತ್ಸವವು ತಾ. ೧೮ ರಿಂದ (ಇಂದಿನಿAದ) ತಾ. ೨೦ ರವರೆಗೆ ನಡೆಯಲಿದೆ.

ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾಕೈಂಕರ್ಯಗಳು ಜರುಗಲಿದ್ದು, ತಾ. ೧೮ ರಂದು (ಇಂದು) ಸಂಜೆ ೫ ಗಂಟೆಯಿAದ ನಗರದ ಮುಖ್ಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ.

ತಾ. ೧೯ ರಂದು ಮಧ್ಯಾಹ್ನ ೩ ಗಂಟೆಗೆ ಮನೆ ಮನೆಯಿಂದ ದೇವಾಲಯಕ್ಕೆ ಪೂಜೆಯನ್ನು ತಂದೊಪ್ಪಿಸುವುದು. ರಾತ್ರಿ ೮ ಗಂಟೆಗೆ ಮನೆ-ಮನೆಯಿಂದ ದೇವಾಲಯಕ್ಕೆ ಆರತಿ ತರಲಾಗುವುದು. ರಾತ್ರಿ ೯ ಗಂಟೆಗೆ ದೇವಿಗೆ ಮಹಾ ಮಂಗಳಾರತಿ, ಹೂವಿನ ವರ ಬೇಡುವುದು ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧.೩೦ರವರೆಗೆ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸಲಾಗುವುದು. ನಂತರ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.