ಎಲ್ಲೋ ಕಂಡ ನಾಯಿ ಮರಿಯನ್ನು ಮುದ್ದಾಗಿದೆ ಎಂದು ಜನರು ಮನೆಗೆ ಕರೆದೊಯ್ಯುತ್ತಾರೆ. ಹೆಣ್ಣು-ಗಂಡು ಎಂದು ಹಲವರು ಬೇದಭಾವ, ಲಿಂಗ ತಾರತಮ್ಯ ಮಾಡುತ್ತಾರಾದರೂ ನೋಡಲು ಸುಂದರವಾಗಿದೆ, ಜಾತಿ ಮರಿ ಎಂದು ಸಾಕಲು ಕರೆದೊಯ್ದು ತಮ್ಮ ಮಕ್ಕಳಂತೆ ಸಾಕುತ್ತಾರೆ. ಅದೇ ಮುದ್ದು ಮರಿ ಬೆಳೆದು ಪುಟಾಣಿ ಮರಿಗಳಿಗೆ ಜನ್ಮ ನೀಡಿದಾಗ ಮಾನವೀಯತೆ ಮರೆತು ಜನರು ಅವುಗಳನ್ನು ರಸ್ತೆ ಬದಿಯಲ್ಲಿ, ಚರಂಡಿಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಜನರಿಲ್ಲದಿದ್ದಾಗ ಬಿಟ್ಟು ಅನಾಥ ಮರಿಯನ್ನಾಗಿ ಮಾಡಿ ಹೋಗುತ್ತಾರೆ. ಇದೇ ನಾಯಿ ಮುಂದೆ ತಿನ್ನಲು ಆಹಾರವಿಲ್ಲದೆ ಬೀದಿಬೀದಿಯಲ್ಲಿ ಅಲೆಯುತ್ತ ಬೀದಿ ನಾಯಿ ಎನಿಸಿಕೊಳ್ಳುತ್ತದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಮರಿಗಳನ್ನು ಅನಾಥ ಮಾಡುವುದನ್ನು ತಡೆಗಟ್ಟುವ ಪರಿಹಾರ ಜನರ ಕೈಯಲ್ಲಿದೆ. ಹೆಣ್ಣು ಮರಿ ಎಂದು ಶೋಷಣೆ ಮಾಡದೆ ಕೆಲವರು ನಿಜವಾಗಿಯೂ ದೇವರ ಕಾರ್ಯವನ್ನು ಮಾಡುತ್ತಾರೆ. ಹೀಗೆ ಮಾಡುವವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ತಮ್ಮ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವುದು ಅಗತ್ಯ. ಇದರಿಂದಾಗಿ ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳಿಗೂ, ನಿಮಗೂ ಹಾಗೂ ಸಮಾಜಕ್ಕೂ ಪ್ರಯೋಜನಕಾರಿಯಾಗಲಿದೆ. ಸಂತಾನ ಕಡಿಮೆ ಮಾಡುವುದಲ್ಲದೆ ಅತ್ಯುತ್ತಮ ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಪ್ರಮುಖ ನಿರ್ಧಾರಗಳಲ್ಲಿ ಇದು ಒಂದಾಗಿದೆ.
ಸAತಾನಹರಣ ಶಸ್ತçಚಿಕಿತ್ಸೆಗೆ ಸಮಾನಾರ್ಥಕವಾಗಿದೆ, ಇದು ಗಂಡು ಮತ್ತು ಹೆಣ್ಣು ಸಾಕು ಪ್ರಾಣಿಗಳೆರಡಕ್ಕೂ ಅನ್ವಯಿಸುತ್ತದೆ.
ಹುಸಿ-ಗರ್ಭಧಾರಣೆಯ ಪ್ರಜ್ಞೆಯನ್ನು ನಿಗ್ರಹಿಸಲು ಸಹಕಾರಿ
ಹುಸಿ ಗರ್ಭಧಾರಣೆಯು ನಾಯಿ ತಾನು ಗರ್ಭಿಣಿ ಇಲ್ಲದಿದ್ದಾಗ ತಾನು ಗರ್ಭಿಣಿಯಾಗಿರುವಂತೆ ಭಾವಿಸುವ ಸ್ಥಿತಿಯಾಗಿದೆ. ಸಂತಾನೋತ್ಪತ್ತಿ ಋತುವಿನಲ್ಲಿ ಈ ಪ್ರಜ್ಞೆ ವಿಶೇಷವಾಗಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಸಾಕುಪ್ರಾಣಿಗಳಲ್ಲಿ ಅಸ್ವಸ್ಥತೆಯ ಭಾವನೆಯು ಹುಸಿ-ಗರ್ಭಧಾರಣೆಯ ಸಂದರ್ಭ ಹೆಚ್ಚುತ್ತದೆ. ಸಂತಾನಹರಣ ಶಸ್ತçಚಿಕಿತ್ಸೆಯು ಅದನ್ನು ಸುಲಭವಾಗಿ ತಪ್ಪಿಸಬಹುದು.
ಸಂತಾನಹರಣ ಶಸ್ತçಚಿಕಿತ್ಸೆಯು ಕೆಲವು ಆಕ್ರಮಣಕಾರಿ ಸಾಕುಪ್ರಾಣಿಗಳ ನಡವಳಿಕೆಯನ್ನು ಶಾಂತರೂಪಕ್ಕೆ ತರಲು ಸಹಕಾರಿಯಾಗುತ್ತದೆ.
ಗೆಡ್ಡೆಗಳು ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ
ಹೆಣ್ಣು ಸಾಕುಪ್ರಾಣಿಗೆ ಸಂತಾನಹರಣ ಶಸ್ತçಚಿಕಿತ್ಸೆ ಮಾಡುವುದು ಸ್ತನದ ಗೆಡ್ಡೆಯ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಒಂದು ವೇಳೆ ಸಂಪೂರ್ಣ ಹಿಸ್ಟೆರೆಕ್ಟಮಿ (ಗರ್ಭಾಶಯವನ್ನು ತೆಗೆಯುವ ಶಸ್ತçಚಿಕಿತ್ಸೆ) ಮಾಡಿದರೆ, ಗರ್ಭಾಶಯವಿಲ್ಲದ ಕಾರಣ ಕ್ಯಾನ್ಸರ್ನ ಸಾಧ್ಯತೆಗಳೇ ಇರುವುದಿಲ್ಲ.
ಗಂಡು ನಾಯಿಗಳಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದು. ವೀರ್ಯದ ರಚನೆ ಮತ್ತು ಅದರ ಹೊರಹರಿವಿನ ಕೊರತೆಯು ಅವುಗಳ ವೃಷಣಗಳನ್ನು ಒತ್ತಡಗೊಳಿಸಬಹುದು ಮತ್ತು ಇದರಿಂದಾಗಿ ನಿಮ್ಮ ಸಾಕು ನಾಯಿ ನರಳಾಡಬಹುದು. ಗಂಡು ನಾಯಿಗಳಲ್ಲಿನ ಕ್ಯಾನ್ಸರ್ ಪ್ರಕರಣಗಳು ಶೇ. ೯೦ ರಷ್ಟು ವೃಷಣದ ಗೆಡ್ಡೆಗಳಿಂದ ಉಂಟಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ವೃಷಣಗಳನ್ನು (ಕ್ಯಾನ್ಸರ್ ಪೀಡಿತ) ತೆಗೆದುಹಾಕುವುದರಿಂದ ಸಂತಾನಶಕ್ತಿ ಹರಣ ಶಸ್ತçಚಿಕಿತ್ಸೆಯು ಅವುಗಳ ಅಪಾಯವನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ.
ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್
ರೇಬಿಸ್ ಕಾಯಿಲೆ ರಾಬ್ಡೋವಿರಿಡೆ ಜಾತಿಗೆ ಸೇರಿದ ನರಮಂಡಲ ಸೋಂಕನ್ನು ಮುಖ್ಯವಾಗಿ ನಾಯಿ, ಹಸು, ಬೆಕ್ಕು, ನರಿ ಹಾಗೂ ಮನುಷ್ಯರಿಗೆ ಕಾಯಿಲೆ ಉಂಟುಮಾಡುತ್ತದೆ. ರೇಬೀಸ್ ರೋಗಗ್ರಸ್ತ ಪ್ರಾಣಿಯ ಕಚ್ಚುವಿಕೆಯಿಂದ ಹಾಗೂ ಪ್ರಾಣಿಯ ಲಾಲಾರಸ ಸಂಪರ್ಕದಿAದ ಹರಡುತ್ತದೆ. ಆದ್ದರಿಂದ ಮನುಷ್ಯರ ಜೀವ ತೆಗೆಯುವ ಈ ಅಪಾಯಕಾರಿ ಕಾಯಿಲೆಯಿಂದ ದೂರವಿರಲು ಹಾಗೂ ತಡೆಗಟ್ಟಲು ತಮ್ಮ ನಾಯಿಗಳಿಗೆ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಕೊಡಿಸುವುದು ಅತ್ಯವಶ್ಯಕ. ಇದರಿಂದ ನಿಮ್ಮ ಸಾಕು ಪ್ರಾಣಿ, ನೀವು ಮತ್ತು ಕುಟುಂಬದವರು ರೋಗಮುಕ್ತರಾಗಿರಬಹುದು.
- ಸಿಂಬಾಸ್ ಹೋಮ್