ಗುಡ್ಡೆಹೊಸೂರು, ಏ. ೧೬: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಮುತ್ತಪ್ಪ ದೇವಸ್ಥಾನದ ಎಂಟನೇ ವರ್ಷದ ವಾರ್ಷಿಕೊತ್ಸವ ತಾ. ೩೦ ಮತ್ತು ಮೇ ೧ ರಂದು ನಡೆಯಲಿದೆ. ತಾ ೩೦ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಮುತ್ತಪ್ಪ ತಿರುವಪ್ಪ ಅಲಂಕಾರ ಮಹಾಪೂಜೆ ನಡೆಯಲಿದೆ. ಸಂಜೆ ೫ ಗಂಟೆಗೆ ಶ್ರೀ ನಂಜುAಡೇಶ್ವರ ದೇವಸ್ಥಾನದಿಂದ ಕುಂಭಕಳಸ ಮೆರವಣಿಗೆ ನಡೆಯಲಿದೆ. ಶ್ರೀ ಪುರುಷೋತ್ತಮಡೆಯ ದರ್ಶಿನಿ ಕಣ್ಣೂರು ಅವರು ಕುಂಬ ಕಳಸ ಸ್ವೀಕಾರ ಮಾಡಲಿದ್ದಾರೆ. ಮೇ ೧ ರಂದು ಬೆಳಿಗ್ಗೆ ೫.೩೦ ಕ್ಕೆ ಮುತ್ತಪ್ಪ ತಿರುವಪ್ಪತೆರೆ ನಂತರ ಪ್ರಸಾದ ವಿತರಣೆ ನಡೆಯಲಿದೆ. ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.