ಕೂಡಿಗೆ, ಏ. ೧೪ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೀರ್ತನ ಮತ್ತು ವಿಜಯನಗರದ ಸುಬ್ರಮಣಿ ಎಂಬವರ ಮನೆಯ ಮೇಲೆ ಭಾರಿ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟ್‌ಗಳು ಧ್ವಂಸವಾಗಿ ಹಾನಿಯಾಗಿವೆ.

ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರುಗಳಾದ ಗಿರೀಶ್, ದಿನೇಶ್, ಪಾರ್ವತಮ್ಮ ರಾಮೇಗೌಡ, ಖತಿಜಾ, ಈರಯ್ಯ, ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರÀವಸೆ ನೀಡಿದ್ದಾರೆ.