ಗೋಣಿಕೊಪ್ಪಲು, ಏ.೧೪ : ೨೦೧೯-೨೧ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ತಟ್ಟೆಕೆರೆ ಹಾಡಿಯ ಸೋರೆ ಬುರುಡೆ ಕಲಾವಿದ ಜೇನುಕುರುಬರ ಮರಿ(೮೦) ಅವರಿಗೆ ಹೊಸಪೇಟೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೇನುಕುರುಬರ ಸಂಪ್ರದಾಯ, ಆಚಾರ-ವಿಚಾರಗಳನ್ನು ಮೈಗೂಡಿಸಿ ಕೊಂಡಿರುವ ಮರಿ, ಬುರುಡೆ ಆಡಿಸುವ ಮೂಲಕವೇ ಕಾಯಿಲೆ ಗಳನ್ನು ಗುಣಪಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಅವರ ಪತ್ನಿ ನೀಲಿ ಸಾಥ್ ನೀಡಿದ್ದಾರೆ. ೬೦ ವರ್ಷಗಳಿಂದ ಈ ಕಲೆಯನ್ನು ಮುಂದುವರೆಸಿಕೊAಡು ಬಂದಿದ್ದಾರೆ.
ಸೋರೆ ಬುರುಡೆ ಹಿಡಿದು ಚಾಪೆ ಮೇಲೆ ಕುಳಿತು ಮೊರದಲ್ಲಿ ವೀಳ್ಯದೆಲೆ, ಅಡಿಕೆ, ದೀಪ ಅಕ್ಕಿ ಅರಶಿನ ಕುಂಕುಮ, ಹತ್ತಿಯ ಬತ್ತಿ, ಗಂಧದ ಕಡ್ಡಿಗಳನ್ನು ಇಟ್ಟು ಬುರುಡೆ ಪೂಜಿಸುತ್ತಾರೆ. ಬಳಿಕ ಮೈ ಮೇಲೆ ದೇವರನ್ನು ಆವಾಹಿಸಿಕೊಂಡು ಹಾಡು ಹೇಳುತ್ತಾ ಬಂದವರ ಕಷ್ಟ ಕೇಳುತ್ತಾರೆ. ಕಾಯಿಲೆ ಬಂದವರನ್ನು ಕೂರಿಸಿ ಕೊಂಡು ತಲೆಗೆ ಸೋರೆ ಬುರುಡೆ ಯಿಂದ ಮಂತ್ರಿಸಿ ಕಳುಹಿಸುತ್ತಾರೆ. ಇಂಥ ಕಲೆಯಿಂದ ಮರಿ ದಕ್ಷಿಣ ಕೊಡಗಿನ ಜೇನುಕುರುಬ ಹಾಡಿಯಲೆಲ್ಲ ಹೆಸರುವಾಸಿಯಾಗಿ ದ್ದಾರೆ. ಇವರ ಕಲೆಯನ್ನು ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾರಂಭದಲ್ಲಿ ಸಚಿವ ಆನಂದ್ ಸಿಂಗ್, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಇದ್ದರು.