ವೀರಾಜಪೇಟೆ, ಏ. ೧೪: ವೃದ್ಧೆಗೆ ಕೆಲಸ ಕೊಡಿಸುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಿವಿಓಲೆ ಅಪಹರಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬAಧ ಈರ್ವರನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.

ವೀರಾಜಪೇಟೆ ತಾಲೂಕು ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಾಲಿ, ಕಿರುಂದಾಡು ನಿವಾಸಿ ಮಣಿ ಅಲಿಯಾಸ್ ಕುಟ್ಟಪ್ಪ (೫೦) ಮತ್ತು ನಾಲ್ಕೇರಿ ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಗಾಯಿತ್ರಿ (೪೫) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿದ್ದವರು. ಪ್ರಕರಣದ ಪ್ರಮುಖ ಅರೋಪಿ ಮಣಿ ಅಲಿಯಾಸ್ ಕುಟ್ಟಪ್ಪ ೨೦ ವರ್ಷಗಳ ಹಿಂದೆ ವೀರಾಜಪೇಟೆ ಕೆದಮುಳ್ಳೂರು ಗ್ರಾಮದಲ್ಲಿ ಮಹಿಳೆಯ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಸೆರೆಮನೆ ವಾಸ ಅನುಭವಿಸಿ ಬಿಡುಗಡೆಯಾಗಿದ್ದ ವ್ಯಕ್ತಿ. ಪ್ರಕರಣದ ಮತ್ತೋರ್ವ ಆರೋಪಿ ಗಾಯಿತ್ರಿ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ವೀರಾಜಪೇಟೆ ಬೋಯಿಕೇರಿ ಗ್ರಾಮದ ನಿವಾಸಿ ರಾಜಮ್ಮ (೬೫) ನಗರದ ಕ್ಯಾಂಟಿನ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕ್ಯಾಂಟಿನ್‌ಗೆ ಕುಟ್ಟಪ್ಪ ನಿತ್ಯ ಬರುತ್ತಿದ್ದರು. ಇದರಿಂದ ರಾಜಮ್ಮ ಅವರಿಗೆ ಕುಟ್ಟಪ್ಪನ ಪರಿಚಯವಾಗಿದೆ. ರಾಜಮ್ಮ ಯಾರ ಮನೆಯಲ್ಲಾದರು ಕೆಲಸವಿದ್ದರೆ ತಿಳಿಸುವಂತೆ ಕುಟ್ಟಪ್ಪ ಬಳಿ ಹೇಳಿದ್ದರು. ಇದನ್ನು ಉಪಯೋಗಿಸಿಕೊಂಡ ಆರೋಪಿ ಕುಟ್ಟಪ್ಪ ರಾಜಮ್ಮಳ ಕಿವಿಯಲ್ಲಿದ್ದ ಓಲೆಯನ್ನು ಕಳವು ಮಾಡಲು ಸ್ಕೆಚ್ ಹಾಕಿದ್ದಾನೆ. ಇದಕ್ಕೆ ಗಾಯಿತ್ರಿಯ ಸಹಾಯವನ್ನು ಪಡೆದುಕೊಂಡಿದ್ದಾನೆ.

ತಾ. ೫ ರಂದು ಬೆಳಿಗ್ಗೆ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಗಾಯತ್ರಿಯೊಂದಿಗೆ ರಾಜಮ್ಮನನ್ನು ಆಟೋ ಒಂದರಲ್ಲಿ ನಗರದಿಂದ ಹೊರ ವಲಯದ ಬೇಟೋಳಿ ಚಿಟ್ಟಡೆ ಗ್ರಾಮದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಬಾಡಿಗೆ ನೀಡಿ ಆಟೋ ಅನ್ನು ಕಳುಹಿಸಿದ್ದಾನೆ.

ಬಳಿಕ ವೃದ್ಧೆಯ ಮೇಲೆ ಹಲ್ಲೆ ನಡೆಸಿ ವೇಲ್‌ನಿಂದ ಕತ್ತನ್ನು ಬಿಗಿಗೊಳಿಸಿ ಕೊಲೆ ಮಾಡುವ ಯತ್ನ ಮಾಡಿದ್ದಾನೆ. ಪರಿಣಾಮ ಪ್ರಜ್ಞಾಹೀನಾಗೊಂಡ ರಾಜಮ್ಮ ಕುಸಿದು ಬೀಳುತ್ತಾರೆ. ನಂತರ ರಾಜಮ್ಮ ಧರಿಸಿರುವ ಚಿನ್ನದ ಕಿವಿಓಲೆಯನ್ನು ಅಪಹರಿಸಿ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರಜ್ಞೆ ಬಂದ ನಂತರ ರಾಜಮ್ಮ ಘಟನೆ ನಡೆದ ಸ್ಥಳದಿಂದ ಸುಮಾರು ಆರು ಕಿ.ಮೀ. ಕಾಲ್ನಡಿಗೆ ಮೂಲಕ ತೆರಳಿ ಮನೆ ಸೇರುತ್ತಾರೆ. ನಡೆದ ಘಟನೆಯನ್ನು ಪತಿ ಕಾಂತರಾಜು ಅವರ ಬಳಿ ಹೇಳಿಕೊಂಡು ಅದೇ ದಿನ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣದ ಜಾಡುಹಿಡಿದು ತನಿಖೆಗೆ ಮುಂದಾಗಿದ್ದಾರೆ. ನಗರದ ತಾಲೂಕು ಮೈದಾನದಲ್ಲಿ ಪ್ರಕರಣದ ಪ್ರಮುಖ ಆರೋಪಿ ಕುಟ್ಟಪ್ಪನನ್ನು ಪೊಲೀಸರು ಬಂಧಿಸುತ್ತಾರೆ. ಆರೋಪಿ ಕುಟ್ಟಪ್ಪನನ್ನು ತನಿಖೆಗೆ ಒಳಪಡಿಸುವ ಸಂದರ್ಭದಲ್ಲಿ ಪ್ರಕರಣ ಮತ್ತೋರ್ವ ಆರೋಪಿಯ ವಿಳಾಸ ಪೊಲೀಸರಿಗೆ ಮಾಹಿತಿ ದೊರೆತು ನಾಲ್ಕೇರಿ ಗ್ರಾಮದ ಲಕ್ಕುಂದ ಪೈಸಾರಿಯಲ್ಲಿ ಗಾಯತ್ರಿಯನ್ನು ಬಂಧಿಸಲಾಗಿದೆ.

ಬಂಧಿತರಿAದ ಅಪಹರಿಸಿದ ಮಾಲು ವಶಕ್ಕೆ ಪಡೆಯುತ್ತಾರೆ. ಬಂಧಿತ ಆರೋಪಿಗಳ ಮೇಲೆ ರಾಜಮ್ಮ ನೀಡಿದ ದೂರಿನ ಅನ್ವಯ ದರೋಡೆ ಮತ್ತು ಹಲ್ಲೆ ಪ್ರಕರಣ ೩೯೨ ಐ.ಪಿ.ಸಿ ರೆ/ವಿ ೩೪ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿಕೊಂಡು. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧÀನದಲ್ಲಿಡಲಾಗಿದೆ.

ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿ ಮಲ್ಚೀರ ಎ.ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ, ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಅವರ ನಿದೆೆÃðಶನ, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ, ಸಿಬ್ಬಂದಿಗಳಾದ ಎಸ್.ಟಿ. ಗಿರೀಶ್, ಆನಂದ್ ಡೊಳ್ಳಿ, ಮಧು, ಕಿರಣ್, ಗೀತಾ, ಮತ್ತು ವಾಣಿ ಹಾಗೂ ಚಾಲಕ ರಮೇಶ್ ಅವರುಗಳು ಭಾಗವಹಿಸಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ