ಮಡಿಕೇರಿ, ಏ. ೧೫: ಹಿರಿಯ ನಾಗರಿಕರ ವೇದಿಕೆಯ ಸಾಮಾನ್ಯ ಸಭೆಯು ಕ್ಯಾಪಿಟಲ್ ವಿಲೇಜ್ನಲ್ಲಿ ಇತ್ತೀಚೆಗೆ ನಡೆಯಿತು.
ಮಾಜಿ ಕಾನೂನು ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ವೇದಿಕೆಯ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿಕೊಂಡರು. ಈ ರೀತಿಯ ಸಭೆ, ಸನ್ಮಾನ ಕಾರ್ಯಕ್ರಮಗಳು ಆಗಿಂದಾಗ್ಗೆ ಏರ್ಪಡಿಸಿ, ಹಿರಿಯ ನಾಗರಿಕರು ಯೋಗ್ಯ ರೀತಿಯಲ್ಲಿ ಸಮಯ ಕಳೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಸ್ವಂತ ಕಟ್ಟಡ ಹೊಂದುವ ಬಗ್ಗೆಯೂ ಆಶಾದಾಯಕ ಮಾತುಗಳನ್ನಾಡಿದರು.
ಹಿರಿಯ ಸಾಹಿತಿ ನಾಗೇಶ್ ಕಾಲೂರು ಮಾತನಾಡಿದರು. ಡಾ. ಪ್ರಶಾಂತ್ ಮಾತನಾಡಿ, ಕಣ್ಣಿನ ಆರೋಗ್ಯ ರಕ್ಷಣೆ ಬಗ್ಗೆ ವಿವರವಾಗಿ ತಿಳುವಳಿಕೆ ನೀಡಿದರು.
ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಅತಿಯಾಗಿ ಮೊಬೈಲ್ ಬಳಕೆಯಿಂದ ಕಣ್ಣಿಗೆ ಆಗುವ ಹಾನಿಯನ್ನು ಮನಮುಟ್ಟುವಂತೆ ವಿವರಿಸಿದರು.
ವೇದಿಕೆಯ ಅಧ್ಯಕ್ಷ ಕೆ.ವಿ. ತಿಮ್ಮಯ್ಯ ಸ್ವಾಗತಿಸಿ, ಹಿರಿಯ ನಾಗರಿಕ ವೇದಿಕೆಯು ನಡೆದು ಬಂದ ದಾರಿಯನ್ನು ವಿವರಿಸಿ, ಸ್ವಂತ ನಿವೇಶನ ಕಟ್ಟಡ ಹೊಂದಲು ಸರ್ವರ ಸಹಕಾರ ಕೋರಿದರು.
ಸ್ಥಾಪಕ ಉಪಾಧ್ಯಕ್ಷ ಪೆಮ್ಮಂಡ ಜಪ್ಪು ಗಣಪತಿ ಉಪಸ್ಥಿತರಿದ್ದರು. ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಪಿ.ಎಸ್. ಅರವಿಂದ ವರದಿ ವಾಚಿಸಿದರು. ಸಭೆಯಲ್ಲಿ ಹಿರಿಯ ಸಾಹಿತಿ ನಾಗೇಶ್ ಕಾಲೂರು ಮತ್ತು ಜಿಲ್ಲೆಯ ಖ್ಯಾತ ನೇತ್ರ ತಜ್ಞ ಡಾ. ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು, ಇತರರು ಇದ್ದರು. ಸಭೆಯ ಆರಂಭದಲ್ಲಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಶೋಭ ಸುಬ್ಬಯ್ಯ ಪ್ರಾರ್ಥಿಸಿದರು. ಬಿ.ಕೆ. ನಂಜಪ್ಪ ವಂದಿಸಿದರು.