ನಾಪೋಕ್ಲು, ಏ. ೧೫: ಸ್ಥಳೀಯ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ತಾ. ೧೮ ರಿಂದ ೨೪ ರವರೆಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೊದಲ ವರ್ಷದ ನಾಲ್‌ನಾಡ್ ಕೊಡವ ಹಾಕಿ ಹಬ್ಬವನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಹೇಳಿದರು.

ಕ್ಲಬ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೮ ರಂದು ೧೦ ಗಂಟೆಗೆ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಶಾಸಕ ಕೆ.ಜಿ. ಬೋಪಯ್ಯ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕಾಫಿ ಬೆಳೆಗಾರ ಮೂವೇರ ಜಿ. ಬೆಳ್ಯಪ್ಪ, ಮುಕ್ಕಾಟೀರ ಅಣ್ಣಯ್ಯ ಉದ್ಯಮಿ, ವಾಂಜAಡ ಕಾರ್ಯಪ್ಪ, ಜಿ.ಎಸ್.ಟಿ. ಅಧಿಕಾರಿ ಪಟ್ಟಚೆರುವಾಳಂಡ ಪೂಣಚ್ಚ, ಕಾಫಿ ಬೆಳೆಗಾರರು ಉಪಸ್ಥಿತರಿರುವರು ಎಂದರು.

ಪಂದ್ಯಾಟದಲ್ಲಿ ಜಯಗಳಿಸಿದ ತಂಡಕ್ಕೆ ೫೦ ಸಾವಿರ ನಗದು, ದ್ವಿತೀಯ ೩೦ ಸಾವಿರ ಬಹುಮಾನವನ್ನು ನೀಡಲಾಗುವುದು. ಅಂತಿಮ ಪಂದ್ಯಾಟ ತಾ. ೨೪ ರಂದು ನಡೆಯಲಿದೆ ಎಂದರು. ಅಂಬಿ ಕಾರ್ಯಪ್ಪ ಮಾತನಾಡಿ ಈಗಾಗಲೇ ಸುಮಾರು ೪೪ ತಂಡಗಳು ಹೆಸರನ್ನು ನೊಂದಾಯಿಸಿದ್ದು ಪಂದ್ಯಾಟವು ೭ ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿ ಸಾರ್ವಜನಿಕ ಸಹಕಾರ ಕೋರಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಅರೆಯಡ ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚಿಯಕಪೂವಂಡ ಅಪ್ಪಚ್ಚು, ಸಹಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಚಾಂಚಿ ಕರವಂಡ ಬೆಳ್ಯಪ್ಪ, ನಿರ್ದೇಶಕರಾದ ಬೊಳ್ಳಚೆಟ್ಟಿರ ಸುರೇಶ್, ಕುಂಡ್ಯೋಳAಡ ಬೋಪಣ್ಣ ಇದ್ದರು.