'ಕೂಡಿಗೆ, ಏ. ೧೫: ಕೂಡಿಗೆ ಡೈರಿಯು ಕರ್ನಾಟಕ ರಾಜ್ಯದ ಮೊಟ್ಟಮೊದಲ ಹಾಲಿನ ಡೈರಿ ಎಂಬ ಖ್ಯಾತಿ ಹೊಂದಿದ್ದು, ಸರ್ವಾಂಗೀಣ ಪ್ರಗತಿಯ ಮೂಲಕ ಹೈನುಗಾರರು, ಗ್ರಾಹಕರಿಗೆ ಗ್ರಾಮಾಂತರ ಪ್ರದೇಶದ ರೈತರ ಪ್ರಗತಿಗೆ ವರದಾನವಾಗಿ ಪರಿಣಮಿಸಿದೆ.
ಕೂಡಿಗೆ ಡೈರಿಯು ಕರ್ನಾಟಕದ ಮೊಟ್ಟಮೊದಲ ಹಾಲಿನ ಡೈರಿಯಾಗಿ ೧೯೫೫ರಲ್ಲಿ ಕೂಡಿಗೆಯಲ್ಲಿ ಅಸ್ತಿತ್ವಕ್ಕೆ ಬಂದು ಕಳೆದ ೬೭ ವರ್ಷಗಳಲ್ಲಿ ಜಿಲ್ಲೆಯ ಜನರಿಗೆ ಪ್ರತಿನಿತ್ಯ ಹಾಲು ಪೂರೈಕೆಯಲ್ಲಿ ತೊಡಗಿಸಿಕೊಂಡಿದೆ.
ಆದರೆ ಕಳೆದ ೪೦ ವರ್ಷಗಳ ಹಿಂದೆ ನಿರ್ಮಾಣಗೊಂಡ ಕೂಡಿಗೆ ಡೈರಿಯ ಹಳೆಯ ಕಟ್ಟಡ ಇದೀಗ ಶಿಥಿಲಾವಸ್ಥೆಯ ಹಂತದಲ್ಲಿದ್ದು, ಇದೇ ಕಟ್ಟಡದಲ್ಲಿ ಡೈರಿಯ ಆಡಳಿತ ಕಚೇರಿಯು ಸಹ ನಡೆಯುತ್ತಿದೆ. ಈ ಕಟ್ಟಡವು ತೀರಾ ಶಿಥಿಲಗೊಂಡಿದ್ದು, ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ನ ಪದರ ಉದುರುತ್ತಿದೆ.
ಆದರೂ ಸಹ ಇದೇ ಕಟ್ಟಡದಲ್ಲಿ ಕಚೇರಿಯ ಕೆಲಸಗಳು ದಿನಂಪ್ರತಿ ನಡೆಯುತ್ತಿವೆ. ಈ ಕಟ್ಟಡವು ಅಂದಿನ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗಿತ್ತು.
ಕಳೆದ ೫೦ ವರ್ಷಗಳಿಂದಲೂ ಹಾಸನ ಹಾಲು ಒಕ್ಕೂಟದ ಆಡಳಿತ ವ್ಯವಸ್ಥೆ ಅಡಿಯಲಿ ಕೂಡಿಗೆ ಡೈರಿಯು ಸಾಗುತ್ತಿದೆ.
ಹಾಸನ ಹಾಲು ಒಕ್ಕೂಟದ ವತಿಯಿಂದ ಕಳೆದ ೨೦ ವರ್ಷಗಳ ಹಿಂದೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಇದೆ ಕಟ್ಟಡದ ಸಮೀಪದಲ್ಲಿ ನೂತನ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಗಳನ್ನು ಅಳವಡಿಕೆ ಮಾಡಿ ಕಟ್ಟಡವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು.
ಇದರಿಂದಾಗಿ ದಿನದ ೨೪ ಗಂಟೆಯೂ ಚಟುವಟಿಕೆಗಳಿಂದ ಕೂಡಿರುವ ಕೂಡಿಗೆ ಡೈರಿಯಲ್ಲಿ ಸುಸಜ್ಜಿತ ಯಂತ್ರೋಪ ಕರಣಗಳಿದ್ದು, ಸಾವಿರಾರು ಲೀಟರ್ ಹಾಲು ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಲೇ ಇವೆ.
ಈ ಕೇಂದ್ರದಲ್ಲಿ ಹಾಲನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಕಾಪಾಡಲೆಂದೇ ಕೋಟಿಗಟ್ಟಲೆ ಬೆಲೆಬಾಳುವ ಯಂತ್ರಗಳನ್ನು ಅಳವಡಿಸಲಾಗಿದ್ದು ಹಾಲಿನ ಸಂಸ್ಕರಣಾ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ನಡೆಯುವುದರ ಮೂಲಕ ಹಾಲಿನ ಗುಣಮಟ್ಟ ಕೂಡ ಕಾಯ್ದಿರಿಸಿಕೊಳ್ಳಲಾಗಿದೆ.
ಕೂಡಿಗೆ ಡೈರಿಯು ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿ ವ್ಯವಸ್ಥೆ ಅಡಿಯಲ್ಲಿ ಸಾಗುತ್ತಿರುವು ದರಿಂದ, ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿಯವರು ಮತ್ತು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರು ಬೀಳುವ ಹಂತ ತಲುಪಿರುವ ಹಳೆಯ ಕಟ್ಟಡವನ್ನು ಪರಿಶೀಲನೆ ನಡೆಸಿ ನಂತರ ಕೆಡವಿ ಬದಲಿ ಕಟ್ಟಡವನ್ನು ನಿರ್ಮಾಣದ ಮಾಡಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಒತ್ತಾಯವಾಗಿದೆ.
ಈಗಾಗಲೇ ಹಾಸನ ಹಾಲು ಒಕ್ಕೂಟದ ವತಿಯಿಂದ ಹಾಲು ಸೇರಿದಂತೆ ೪೦ ಬಗೆಯ ಹಾಲಿನ ಉತ್ಪನ್ನಗಳು ಜಿಲ್ಲೆಯ ಜನರಿಗೆ ಆಯಾ ಕೇಂದ್ರಗಳಲ್ಲಿ ದಿನಂಪ್ರತಿ ದೊರಕುತ್ತಿವೆ.
ಈ ಕೇಂದ್ರದಲ್ಲಿ ಮೂರು ಜಿಲ್ಲೆಯ ರೈತರಿಗೆ ಕೇಂದ್ರ ಸ್ಥಾನವಾಗಿ ಅನುಕೂಲ ವಾಗುವಂತೆ ಹಾಲು ಮತ್ತು ಜೇನು ಅಭಿವೃದ್ಧಿಪಡಿಸುವ ಹೊಸ ಯೋಜನೆ ಸೇರಿದಂತೆ ಹೈನುಗಾರಿಕೆಗೆ ಸಂಬAಧಿಸಿ ದಂತೆ ಅಧ್ಯಯನ ಕೇಂದ್ರವನ್ನು ತೆರೆಯುವ ಮೂಲಕ ರೈತರು ಗಳಿಗೆ ಅನುಕೂಲ ಕಲ್ಪಿಸಿಕೊಡ ಬೇಕೆಂದು ಈ ವ್ಯಾಪ್ತಿಯ ನೂರಾರು ರೈತರ ಬೇಡಿಕೆ ಯಾಗಿದೆ. ತರಬೇತಿ ಕೇಂದ್ರದ ಜೊತೆಗೆ ವಿವಿಧ ಬಗೆಯ ಪಶು ಆಹಾರದ ಮೇವಿನ ಹುಲ್ಲುಗಳನ್ನು ಬೆಳೆಯಲು ಸ್ಥಳಾವಕಾಶ ಇರುವು ದರಿಂದ ಹೈನುಗಾರಿಕೆ ತರಬೇತಿ ಯನ್ನು ನೀಡಲು ಅನುಕೂಲ ವಾಗಿದ್ದು, ನಿರುದ್ಯೋಗಿ ಗಳಿಗೆ ಅನುಕೂಲ ಕಲ್ಪಿಸಿದಂತಾಗಲಿದೆ.
- ಕೆ.ಕೆ. ನಾಗರಾಜಶೆಟ್ಟಿ.