ಮಡಿಕೇರಿ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನವನ್ನು ಮಡಿಕೇರಿ ನಗರ ಬಿಜೆಪಿ ಪರಿಶಿಷ್ಟ ಜಾತಿ ಘಟಕದ ವತಿಯಿಂದ ರಾಣಿಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ಆಚರಿಸಲಾಯಿತು. ನಗರ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಭರತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಬಾಲ್ಯ ಮತ್ತು ಹಂತ ಹಂತವಾಗಿ ಅವರು ಆಗಿನ ಕಾಲದಲ್ಲಿ ಅನುಭವಿಸಿದ ತೊಂದರೆಗಳನ್ನು ಮೆಟ್ಟಿ ಇಡೀ ವಿಶ್ವ ಮೆಚ್ಚುವ ಸಂವಿಧಾನವನ್ನು ನೀಡಿದರು ಎಂದರು. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿದರು.
ಪೌರಕಾರ್ಮಿಕರಾಗಿ ದುಡಿದು ನಿವೃತ್ತಿ ಹೊಂದಿರುವ ಕರಿಯಪ್ಪ ಮತ್ತು ಮೀನಾಕ್ಷಿಯವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ನೃತ್ಯ ಪ್ರದರ್ಶನ ನಡೆಯಿತು. ನಗರ ಬಿಜೆಪಿ ಅ*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಇತರ ಸಂಘ ಸಂಸ್ಥೆಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮದಿನಾಚರಣೆಯನ್ನು ಆಚರಿಸಿದರು.
ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾಲೂಕು ಭಾರತೀಯ ಜನತಾ ಪಕ್ಷದ ಓಬಿಸಿ ಘಟಕ ವತಿಯಿಂದ ಸ್ವಚ್ಛತಾ ಆಂದೋಲನ ನಡೆಸಲಾಯಿತು.
ಮೊದಲಿಗೆ ಬಾಬಾ ಸಾಹೇಬ್ ಬೀಮರಾಮ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಚ್ಚತಾ ಕಾರ್ಯಕ್ಕೆ ಓಬಿಸಿ ಘಟಕದ ಪದಾಧಿಕಾರಿಗಳು ಮುಂದಾದರು.
ವೀರಾಜಪೇಟೆ ತಾಲೂಕು ಓಬಿಸಿ ಘಟಕದ ಅಧ್ಯಕ್ಷ ಕೆ. ರಾಜೇಶ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ನೂರೇರ ರತಿ ಅಚ್ಚಪ್ಪ, ಜಿ.ಕೆ. ಗೀತಾ, ವಿವೇಕ್, ರಾಮ್‌ದಾಸ್, ಬಿ.ಎನ್. ಪ್ರಕಾಶ್, ಓಬಿಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಗಣೇಶ್, ತಾಲೂಕು ಓಬಿಸಿ ಘಟಕದ ಉಪಾಧ್ಯಕ್ಷÀ ಬಿ.ಎಂ. ಪ್ರಕಾಶ್, ಮನೋಜ್, ರಮ್ಯಾ, ತಾಲೂಕು ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಕಾರ್ಯದರ್ಶಿಗಳಾದ ಎ.ಕೆ. ಸುಬ್ರಮಣಿ, ಸತೀಶ್, ಡಾಲಿ ಉಮೇಶ್, ಖಜಾಂಜಿ ಪ್ರದೀಶ್, ಸದಸ್ಯರುಗಳಾದ ರಿನೀಶ್ ಪಿ.ಕೆ, ಮಾಜಿ ಸೈನಿಕರಾದ ಸಿ.ಎಂ. ಪ್ರಸಾದ್ ಹಾಜರಿದ್ದರು.ಧ್ಯಕ್ಷ ಮನು ಮಂಜುನಾಥ್, ನಗರಸಭೆ ಉಪಾಧ್ಯಕ್ಷೆ ಸವಿತ ರಾಕೇಶ್, ನಗರ ಪ್ರಧಾನ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ, ನಗರಸಭೆ ಸದಸ್ಯರಾದ ಕಲಾವತಿ, ಗೌರಮ್ಮ, ದೇವಾಲಯದ ಅಧ್ಯಕ್ಷ ರಮೇಶ್, ನಗರ ಸಾಮಾಜಿಕ ಜಾಲತಾಣದ ಪ್ರಮುಖ ಪಾಂಡಿರಾ ಪೂಣಚ್ಚ ಬೂತ್ ಅಧ್ಯಕ್ಷ ಮನು ರೈ, ಮುಕುಂದ, ವಿಕ್ಕಿ, ನಾಸಿರ್, ಕುಶಾಲ್, ಜೀವನ್ ಉಪಸ್ಥಿತರಿದ್ದರು.ಕುಶಾಲನಗರ : ಸಮಾಜದಲ್ಲಿ ಅಸಮಾನತೆ ತುಂಬಿದ್ದ ಕಾಲಘಟ್ಟದಲ್ಲಿ ಯುಗಪುರುಷನಾಗಿ ಅವತರಿಸುವ ಮೂಲಕ ಕೆಳವರ್ಗದ ಜನರಲ್ಲಿ ಹೊಸ ಬೆಳಕು ಮೂಡಿಸಿದ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಬಣ್ಣಿಸಿದರು.
ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅನೇಕ ರಾಷ್ಟçಗಳ ಸಂವಿಧಾನಗಳನ್ನು ಓದುವ ಮೂಲಕ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಮಹಾಮಾನವತಾವಾದಿ ಅಂಬೇಡ್ಕರ್ ಕೇವಲ ಸಮುದಾಯ ಒಂದರ ನಾಯಕರಲ್ಲ. ಅವರು ಎಲ್ಲಾ ಸಮುದಾಯಗಳ ಸರ್ವಶ್ರೇಷ್ಠ ನಾಯಕ ಎಂದರು.
ಕೂಡುಮAಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ, ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಬಿ. ಪುಟ್ಟಸ್ವಾಮಿ ಮಾತನಾಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಟಿ. ದಯಾನಂದ ಪ್ರಕಾಶ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮಂಜು ಭಾರ್ಗವಿ, ಕೋಶಾಧಿಕಾರಿ ಕೆ.ವಿ. ಉಮೇಶ್ ಇತರರು ಇದ್ದರು. ಶಿಕ್ಷಕ ಕೆ. ಗೋಪಾಲಕೃಷ್ಣ ನಿರ್ವಹಿಸಿದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ನಿವೃತ್ತ ಶಿಕ್ಷಕ ಜವರೇಗೌಡ ಜ್ಯೋತಿ ಬೆಳಗಿಸಿ, ಅಂಬೇಡ್ಕರ್ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕಳಂಕವೆನಿಸಿದ್ದ ಅಸ್ಪೃಶ್ಯತೆಯ ನಿವಾರಣೆಗೆ ಹೋರಾಡಿದ್ದರಿಂದ ಇಂದು ಹಿಂದುಳಿದವರು ಸಮಾಜದಲ್ಲಿ ಗೌರವದಿಂದ ಬದುಕಲು ಕಾರಣವಾಗಿದೆ. ಅಂಬೇಡ್ಕರ್ ಚಿಂತನೆ ಭಾರತೀಯ ರಾಷ್ಟಿçÃಯತೆಯ ಐಕ್ಯತೆಯ ಸಂಕೇತವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾವನಾ, ಮುಖಂಡರಾದ ಜೆ.ಎಲ್. ಜನಾರ್ಧನ್, ಡಿ.ಎನ್. ವಸಂತ್, ದೇವರಾಜ್ ಕೊಡ್ಲೂರು, ಡಿ.ವಿ. ಜಗದೀಶ್, ಕಾಳಯ್ಯ, ಡಿ.ಆರ್. ವೇದಕುಮಾರ್, ಪ್ರಶಾಂತ್ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ, ಸಂವಿಧಾನ ರಚನೆ, ಸಾಧನೆ, ಹೋರಾಟದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೊಡ್ಡ್ಡಕುಂದ, ರಾಮೇನಹಳ್ಳಿ ಕಿರಿಕೊಡ್ಲಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ಆರ್.ವಿ. ನಾಗೇಶ್, ದರ್ಶನ್, ಆರ್.ಆರ್. ಪವನ್, ಅಕ್ಷಯ್, ಪ್ರಮೋದ್, ಡಿ.ಎಂ. ದರ್ಶನ್, ವಿಕಾಸ್, ಡಿ.ಜೆ. ರಾಜು, ಡಿ.ಕೆ. ಮಹೇಶ್, ವಿನಯ್, ಭರತ್ ಹಾಜರಿದ್ದರು.
ಸಿದ್ದಾಪುರ: ಕೊಡಗು ಜಿಲ್ಲಾ ಅಂಬೇಡ್ಕರ್ ಸೇನೆ ವತಿಯಿಂದ ಸಿದ್ದಾಪುರದ ಬಸ್ಸ್ ನಿಲ್ದಾಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ ನೆಯ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲರಾದ ಎಂ.ಎಸ್ ವೆಂಕಟೇಶ್ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಅಸ್ಪೃಶ್ಯತಾ ನಿವಾರಣೆಗಾಗಿ ಅಂಬೇಡ್ಕರ್‌ರವರು ಬಹುವಾಗಿ ಶ್ರಮಿಸಿದರು. ಜಾತಿ ಭೇದ ವಿರುದ್ಧವಾಗಿ ಹೋರಾಟ ಮಾಡಿದರು. ಸಮಾಜದ ಪ್ರಗತಿಗೆ ಜಾತಿ ವ್ಯವಸ್ಥೆ ಮಹಾಪಿಡುಗು ಎಂದು ವಾದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಅಂಬೇಡ್ಕರ್ ಸೇನೆ ಕಾರ್ಯಾಧ್ಯಕ್ಷ ಟಿ.ಆರ್. ಸತೀಶ್ ಮಾತನಾಡಿ, ಪ್ರಜಾಪ್ರಭುತ್ವವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ನ್ಯಾಯಯುತವಾಗಿ ದೊರೆತಾಗ ಮಾತ್ರ ಸಾಧ್ಯ ಎಂಬ ನಿಲುವನ್ನು ಅಂಬೇಡ್ಕರ್ ತಾಳಿದ್ದರು. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ದೊರಕುವಂತಿರಬೇಕು. ಜಾತಿ, ಮತ, ಲಿಂಗ ತಾರತಮ್ಯಗಳಿಲ್ಲದೆ ಶಿಕ್ಷಣವು ಎಲ್ಲಾ ವರ್ಗದವರಿಗೂ ಸಿಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್, ಕಾರ್ಮಿಕ ಮುಖಂಡ ಹೆಚ್.ಬಿ ರಮೇಶ್, ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳಾದ ಎನ್.ಎಸ್. ಮಂಜು, ಗಣೇಶ್, ಮಣಿಕಂಠ ಹಾಗೂ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾ.ಪಂ.ಯ ಸದಸ್ಯರುಗಳು ಹಾಜರಿದ್ದರು. ಇದೇ ಸಂದರ್ಭ ಪಳನಿಸ್ವಾಮಿ, ಅಜ್ಜಿನಿಕಂಡ ರಾಜು ಅಪ್ಪಯ್ಯ, ಆಟೋ ಚಾಲಕಿ ಸುಜಾತ, ಚಂಡೇ ಕಲಾವಿದ ಶಾಜಿ ಇವರುಗಳನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಬಾವ ಮಾಲ್ದಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಮುಳ್ಳೂರು: ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರು ಎಲ್ಲಾ ವರ್ಗದವರ ಆಸ್ತಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಸ್ತುವಾರಿ ಬಿ.ಬಿ.ಭಾರತೀಶ್ ಹೇಳಿದರು.
ಶನಿವಾರಸಂತೆ ಬಿಜೆಪಿ ವತಿಯಿಂದ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಂದು ನಾವೆಲ್ಲರೂ ಸಮಾನರಾಗಿ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಎಲ್ಲಾ ವರ್ಗದವರೊಂದಿಗೆ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ವಿಶ್ವಕಂಡ ಧೀಮಂತ ನಾಯಕ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಹುಟ್ಟಿದ ದಿನವನ್ನು ಆಚರಿಸಿದರಷ್ಟೆ ಸಾಲದು ಪ್ರತಿದಿನ ಎಲ್ಲರೂ ಅವರು ದೇಶಕ್ಕೆ ನೀಡಿರುವ ಕೊಡುಗೆ ಮತ್ತು ಅವರ ವ್ಯಕ್ತಿತ್ವ ತತ್ವ-ಸಿದ್ಧಾಂತವನ್ನು ನೆನಪಿಸಿಕೊಳ್ಳಬೇಕಿದೆ ಎಂದರು.
ಬಿಜೆಪಿ ಮುಖಂಡ ಎಸ್.ಎನ್.ರಘು ಮಾತನಾಡಿ, ಅಂಬೇಡ್ಕರ್ ಅವರು, ಸರಕಾರಿ ಇಲಾಖೆಗಳಲ್ಲಿ ಸರಿ ಸಮಾನ ಮೀಸಲಾತಿಯನ್ನು ಸಹ ಅವರು ಒದಗಿಸಿಕೊಟ್ಟಿರುವ ಮೂಲಕ ಮೇಲು ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹೋಬಳಿ ಬಿಜೆಪಿ ಅಧ್ಯಕ್ಷ ಯತೀಶ್, ಮಾಜಿ ಜಿ.ಪಂ. ಸದಸ್ಯೆ ಸರೋಜಮ್ಮ, ಭುವನೇಶ್ವರಿ, ದಲಿತ ಪ್ರಮುಖರಾದ ಲೋಕೇಶ್, ಕುಮಾರ್, ಈರಪ್ಪ ದುಂಡಳ್ಳಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್, ಪ್ರಮುಖರಾದ ಹೆಚ್.ಆರ್. ಹರೀಶ್ ಮುಂತಾದವರು ಹಾಜರಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನರೇಂದ್ರ ಮೋದಿ ಭವನದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ರೂಪಿಸಿದ ಭಾರತದ ಸಂವಿಧಾನವು ಬಲಿಷ್ಠತೆಯಿಂದ ಕೂಡಿದ್ದು ಜಾತ್ಯತೀತವಾಗಿದ್ದು, ಎಲ್ಲರಿಗೂ ಸಮಾನತೆಯ ಕಾನೂನನ್ನು ಹೊಂದಿದೆAದು ಚೆಟ್ಟಳ್ಳಿ ಬಿಜೆಪಿ ಪ್ರಮುಖ್ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಬಿಜೆಪಿ ತಾಲೂಕು ಕಾರ್ಯದರ್ಶಿ ಮೇರಿ ಅಂಬುದಾಸ್ ತಿಳಿಸಿದರು. ಭಾರತೀಯ ಜನತಾ ಪಕ್ಷದ ಸೋಮವಾರಪೇಟೆ ತಾಲೂಕು ಪದಾಧಿಕಾರಿಗಳು ಶಕ್ತಿ ಕೇಂದ್ರದ ಪ್ರಮುಖರು ಸಹ ಪ್ರಮುಖರು ವಿವಿಧ ಮೋರ್ಚಾಗಳ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೩೧ನೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ದಿನದ ಮಹತ್ವದ ಕುರಿತು ಮುಖ್ಯಶಿಕ್ಷಕಿ ಮೀನಾ ಮಾತನಾಡಿದರು. ವಿದ್ಯಾರ್ಥಿ ಗಳಿಂದ ಅಂಬೇಡ್ಕರ್ ರವರ ಜೀವನದ ಚರಿತ್ರೆಯ ಬಗ್ಗೆ ಭಾಷಣ ನಡೆಯಿತು.ಕೂಡಿಗೆ: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೩೧ನೇ ಜಯಂತಿಯ ಆಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.ಚೆಯ್ಯಂಡಾಣೆ: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ನೇ ಜಯಂತಿಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಮನೋಹರ ನಾಯ್ಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪೊನ್ನಪ್ಪ, ರವೀಂದ್ರನಾಥ್, ರಾಜಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.