ಪೆರಾಜೆ, ಏ. ೧೫: ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರದ ಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅಭಿವೃದ್ಧಿ ಅನ್ನುವುದು ನಿರಂತರ, ಅದಕ್ಕೆ ಕೊನೆಯಿಲ್ಲ. ಒಮ್ಮೆ ರಸ್ತೆ ವ್ಯವಸ್ಥೆ ಮಾಡಿದರೂ ಅದು ಶಿಥಿಲಗೊಂಡಾಗ ಮತ್ತೆ ಮರು ಡಾಮಾರೀಕರಣದ ಅನಿವಾರ್ಯತೆ ಇರುತ್ತದೆ. ಹಾಗಾಗಿ ನಮ್ಮದು ಆಡಳಿತ ಪಕ್ಷವಾಗಿದ್ದು, ನಾವು ಯಾರನ್ನು ದೂರುವ ಹಾಗಿಲ್ಲ. ಉತ್ತಮ ಆಡಳಿತವನ್ನು ನೀಡಿ ಮುಂದೆ ನಡೆಯುವ ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಪ್ರಯತ್ನ ಮಾಡೋಣ ಎಂದರು.

ಸರ್ಕಾರದಿAದ ಸಿಗುವ ಕೆಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಡಿಕೆ ಹಳದಿ ರೋಗಕ್ಕೆ ಸಂಬAಧಿಸಿದAತೆ ಸರ್ಕಾರ ಹಣ ಬಿಡುಗಡೆ ಮಾಡಿದರೂ ಅದರ ಜವಾಬ್ದಾರಿ ಇದ್ದ ಸಚಿವರಿಗೆ ಬೇರೊಂದು ಜವಾಬ್ದಾರಿ ವಹಿಸಿದ ಕಾರಣ ಅದು ಕಾರ್ಯಗತವಾಗಿಲ್ಲ, ಮುಂದಿನ ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸಭೆಗೆ ಸರ್ಕಾರದ ಸೌಲಭ್ಯಗಳು ಹಾಗೂ ಅಕ್ರಮ-ಸಕ್ರಮ ಕಡತಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಶಾಸಕರು ಹಾಗೂ ಜನಪ್ರತಿನಿಧಿಗಳು ಶ್ರೀ ಶಾಸ್ತಾವು ದೇವಸ್ಥಾನದ ಬಳಿ ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟಿನ ವೀಕ್ಷಣೆ ಮಾಡಿದರು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಶಕ್ತಿ ಕೇಂದ್ರದ ಸಹಪ್ರಮುಖ್ ಚಿನ್ನದ ಅಡ್ಕ, ಸಂಪಾಜೆ ಪ್ರಾ.ಕೃ.ಪ ಸ.ಸಂಘದ ನಿರ್ದೇಶಕ ಯಶವಂತ ದೇವರಗುಂಡ, ಸೇರಿದಂತೆ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಧನಂಜಯ ಕೋಡಿ ಸ್ವಾಗತಿಸಿ, ಉದಯಚಂದ್ರ ಕುಂಬಳಚೇರಿ ವಂದಿಸಿದರು.