ವೀರಾಜಪೇಟೆ, ಏ. ೧೫: ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ವಿದ್ಯಾರ್ಥಿಗಳು ಹಾಗೂ ಯುವಕರು ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ರಾಜ್ಯ ಕ್ರಿಕೆಟ್ ಆಟಗಾರ ಕೆ.ಪಿ. ಪ್ರಭು ಅಪ್ಪಣ್ಣ ಹೇಳಿದರು
ವೀರಾಜಪೇಟೆಯ ಪ್ರಗತಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಕ್ರಿಕೆಟ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ಹಿಂದೆ ಕ್ರಿಕೆಟ್ ತರಬೇತಿ ಪಡೆಯಲು ಬೇರೆ ಊರಿಗೆ ಹೋಗಬೇಕಾಗಿತ್ತು. ಬದಲಾದ ಕಾಲಘಟ್ಟದಲ್ಲಿ ತಾಲೂಕಿನ ೨-೩ ಕಡೆಗಳಲ್ಲಿ ತರಬೇತಿ ದೊರೆಯುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಇಂದಿನ ತರಬೇತಿಯ ಸದುಪ ಯೋಗಪಡಿಸಿಕೊಳ್ಳಬೇಕು ಎಂದರಲ್ಲದೆ ಐಪಿಎಲ್ ಆಟದಲ್ಲಿ ನಾನು ೮ ಭಾರಿ ಭಾಗವಹಿಸಿ ರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಕ್ರಿಕೆಟ್ ಆಟದಲ್ಲಿ ಸದಾ ಭಾಗವಹಿಸಬೇಕು ಇದಕ್ಕೆ ಗುರಿ ಮತ್ತು ಶ್ರದ್ಧೆ ಮುಖ್ಯವಾಗಿದೆ. ಇಲ್ಲಿ ತರಬೇತಿ ಪಡೆದ ಬಳಿಕ ಮಂಗಳೂರಿನಲ್ಲಿ ನಡೆಯುವ ಅರ್ಹತ ಸುತ್ತಿನಲ್ಲಿ ಭಾಗವಹಿಸಿದ ನಂತರ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಭಾಗವಹಿಸು ವಂತಾಗಬೇಕು ಎಂದರು.
ಪ್ರಗತಿ ಶಾಲೆಯ ಆಡಳಿತಾಧಿಕಾರಿ ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ ದೈಹಿಕ ಶಿಕ್ಷಕ ಕವಿನ್, ತರಬೇತುದಾರ ಶಿವಶಕ್ತಿ, ಪೋಷಕರಾದ ಚೇಂದAಡ ಪ್ರವೀಣ್, ನವಿನ್, ಪೂವಯ್ಯ, ಕಲ್ಪನ ಪೂಣಚ್ಚ ಹಾಗೂ ಇತರರು ಭಾಗವಹಿಸಿದ್ದರು.