ಮಡಿಕೇರಿ, ಏ.೧೫: ಯೇಸು ಕ್ರಿಸ್ತನು ಶಿಲುಬೆಯನ್ನೇರಿ ಪ್ರಾಣ ತ್ಯಾಗ ಮಾಡಿದ ದಿನವನ್ನು ಇಂದು ಕ್ರಿಶ್ಚಿಯನ್ ಸಮುದಾಯದವರು ಶುಭ ಶುಕ್ರವಾರವನ್ನಾಗಿ ಆಚರಿಸಿದರು. ನಾಡಿನಾದ್ಯಂತ ಎಲ್ಲ ಪ್ರಾರ್ಥನಾ ಮಂದಿರಗಳಲ್ಲಿ ಶಿಲುಬೆಯ ಹಾದಿ ಎಂಬ ಕಾರ್ಯಕ್ರಮದಡಿಯಲ್ಲಿ ಶಿಲುಬೆಗೆ ಗೌರವ ತೋರುವದರೊಂದಿಗೆ ಪ್ರಾರ್ಥನೆ ನೆರವೇರಿಸಿದರು.

ಶುಭ ಸಂದೇಶಗಳನ್ನು ಸಾರುವದರೊಂದಿಗೆ ಯೇಸುವಿಗೆ ಸಂಬAಧಿಸಿದ ಗೀತೆಗಳನ್ನು ಹಾಡಿದರು. ಇದರ ಅಂಗವಾಗಿ ನಿನ್ನೆ ರಾತ್ರಿ ಧರ್ಮಗುರುಗಳು ಆಯ್ಕೆ ಮಾಡಿದ ೧೨ ಮಂದಿ ಶಿಷ್ಯರುಗಳ ಪಾದ ತೊಳೆದು, ಪಾದಗಳಿಗೆ ಮುತ್ತಿಕ್ಕಿ ‘ನೀವುಗಳು ಶಾಂತಿ ಸಹಬಾಳ್ವೆಗಾಗಿ ಹೀಗೆ ಮತ್ತೋರ್ವರ ಪಾದ ತೊಳೆಯಬೇಕು’ ಎಂಬ ಸಂದೇಶವನ್ನು ಸಾರಿದರು.

ಜಿಲ್ಲಾ ಕೇಂದ್ರ ಮಡಿಕೇರಿಯ ಸಂತ ಮೈಕಲರ ಚರ್ಚ್ನಲ್ಲಿ ರೆ.ಫಾ. ದೀಪಕ್ ಜಾರ್ಜ್ ಅವರ ನೇತೃತ್ವದಲ್ಲಿ ಆಚರಿಸಿದರು. ಈ ಸಂದರ್ಭ ಸಂತ ಮೈಕಲ್ಲರ ವಿದ್ಯಾಸಂಸ್ಥೆಯ ಗುರು ನವೀನ್, ಕನ್ಯಾಸ್ತಿçÃಯರು, ಧರ್ಮ ಕೇಂದ್ರದ ಭಕ್ತರು ಪಾಲ್ಗೊಂಡಿದ್ದರು.

ಸೋಮವಾರಪೇಟೆ : ಕ್ರಿಶ್ಚಿಯನ್ ಸಮುದಾಯದವರ ಪವಿತ್ರ ದಿನವಾದ ಗುಡ್ ಫ್ರೆöÊಡೇ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಇಲ್ಲಿನ ಜಯವೀರ ಮಾತೆ ದೇವಾಲಯಕ್ಕೆ ಒಳಪಡುವ ಸಮುದಾಯ ಬಾಂಧವರು ಪಟ್ಟಣದಲ್ಲಿ ಶಿಲುಬೆಯ ಹಾದಿಯ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಏಸುಕ್ರಿಸ್ತರ ಸ್ಮರಣೆ ಮಾಡಲಾಯಿತು. ನಂತರ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆಗಳು ನಡೆದವು.

ಜಯವೀರಮಾತೆ ದೇವಾಲಯದ ಅಧ್ಯಕ್ಷ ಫಾ. ಎಂ ರಾಯಪ್ಪ, ಕಾರ್ಯದರ್ಶಿ ಶೀಲಾ ಡಿಸೋಜ, ಪದಾಧಿಕಾರಿಗಳಾದ ವಿ.ಎ. ಲಾರೆನ್ಸ್, ಪ್ರಿನ್ಸ್, ವಿನ್ಸಿ, ಮಾರ್ಷಲ್, ಮರ್ವಿನ್, ಸುನಿಲ್ ಸೇರಿದಂತೆ ಸುತ್ತಮುತ್ತಲಿನ ಕ್ರಿಶ್ಚಿಯನ್ ಸಮುದಾಯದವರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.(ಮೊದಲ ಪುಟದಿಂದ) ಸುಂಟಿಕೊಪ್ಪ : ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರ ಮತ್ತು ಶುಭ ಶುಕ್ರವಾರ (ಗುಡ್‌ಫ್ರೆöÊಡೆ) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರುಗಳಾದ ಫಾ. ಅರುಳ್ ಸೆಲ್ವಕುಮಾರ್ ಹಾಗೂ ಮತ್ತಿತರÀ ಗುರುಗಳು ಯೇಸು ಸ್ಥಾಪಿಸಿದ ಕೊನೆಯಭೋಜನ ಮಾನವರ ಪಾಪಕ್ಕಾಗಿ ಶಿಲುಬೆಯಾತನೆ ಸ್ಮರಣೆಯನ್ನು ನಡೆಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡರು. ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ಅವರು ದೇವಾಲಯದ ಕ್ರೆöÊಸ್ತಬಾಂಧವರ ಪಾದಗಳನ್ನು ತೊಳೆಯುವ ಮೂಲಕ ಆಚರಣೆಯನ್ನು ನೆನಪಿಸಿದರು. ನಂತರ ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ಧ್ಯಾನಗಳಲ್ಲಿ ಕ್ರೆöÊಸ್ತಬಾಂಧವರು ತೊಡಗಿಸಿ ಕೊಂಡಿದ್ದರು.

ಮಧ್ಯಾಹ್ನ ೨ ಗಂಟೆಗೆ ದೇವಾಲಯದಿಂದ ಆರಂಭಗೊAಡ ಶಿಲುಬೆಯಾದಿಯು ಸಂತಮೇರಿ ಶಾಲಾ ಆವರಣದಲ್ಲಿ ಬೃಹತ್ ಮರದಿಂಬಿಗಳಿAದ ತಯಾರಿಸಿದ ಶಿಲುಬೆಗಳನ್ನು ಯುವಕ, ಯುವತಿಯರು, ಮಹಿಳೆಯರು, ಪುರುಷರು ಹೊತ್ತು ಸಾಗಿದರು.

ಪ್ರಾರ್ಥನಾ ಕೂಟವನ್ನು ಸಂತ ದೇವಾಲಯದ ಧರ್ಮಗುರುಗಳಾದ ಫಾಧರ್. ಅರುಳ್ ಸೆಲ್ವಕುಮಾರ್ ಹಾಗೂ ಕೂಡಿಗೆ ತೆಪ್ಪೋವನಾ ಧರ್ಮಗುರುಗಳಾದ ಜಾನ್‌ಪಿಂಠೋ, ಡರ‍್ನಹಳ್ಳಿ ಧರ್ಮಕೇಂದ್ರದ ಸಹಾಯಕ ಧರ್ಮಗುರುಗಳಾದ ಅವಿನಾಶ್ ೨ ದಿನದ ಸಾಂಘ್ಯವನ್ನು ನೆರವೇರಿಸಿದರು.