ಮಡಿಕೇರಿ, ಏ. ೧೫: ವಿಳಂಬದಿAದ ವಿವಾದವಾಗಿ ಮಾರ್ಪಟ್ಟಿರುವ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಕಳಪೆ ಕಾಮಗಾರಿ ಆರೋಪಕ್ಕೆ ಗುರಿಯಾಗಿದೆ. ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಕೂಡಿದ ಬಗ್ಗೆ ಚೆಸ್ಕಾಂ ಆಕ್ಷೇಪ ವ್ಯಕ್ತಪಡಿಸಿ ನಗರಸಭೆಗೆ ಪತ್ರ ಬರೆದಿದೆ.

ಈ ಬಗ್ಗೆ ಚೆಸ್ಕಾಂನ ಸಹಾಯಕ ಇಂಜಿನಿಯರ್ ಸಂಪತ್ ಅವರು ನಗರಸಭೆ ಪೌರಾಯುಕ್ತ ರಾಮದಾಸ್ ಅವರಿಗೆ ಪತ್ರ ಬರೆದು ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಟೆಂಡರ್ ಪಡೆದವರಿಗೆ ಸೂಚಿಸುವಂತೆ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಗರಸಭೆಯ ನಗರೋತ್ಥಾನ ಯೋಜನೆ ಮೂಲಕ ನಗರದ ಗಣಪತಿ ಬೀದಿಯ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಮೊದಮೊದಲು ಕ್ಷಿಪ್ರಗತಿಯಲ್ಲಿ ಕಾಮಗಾರಿ ಆರಂಭಿಸಿ ರಸ್ತೆ ಅಗೆಯಲಾಯಿತು. ನಂತರ ಟೆಂಡರ್‌ದಾರರ ಆಕ್ಷೇಪಣೆ ಸೇರಿದಂತೆ ಕೆಲ ತಾಂತ್ರಿಕ ಕಾರಣವೊಡ್ಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಇದರಿಂದ ಜನರು ಸಮರ್ಪಕ ರಸ್ತೆ ಇಲ್ಲದೆ, ಧೂಳಿನ ನಡುವೆ ಬದುಕುವ ಸ್ಥಿತಿ ಸೃಷ್ಟಿಯಾಗಿದೆ.

ಅಗಲೀಕರಣ ಹಿನ್ನೆಲೆ ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ನಗರಸಭೆ ಕೋರಿಕೆಯಂತೆ ಚೆಸ್ಕಾಂ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಯನ್ನು ನೀಡಿದೆ. ಆದರೆ, ಚೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭ ವಿದ್ಯುತ್

(ಮೊದಲ ಪುಟದಿಂದ) ಸಂಬAಧಿತ ಕಾಮಗಾರಿ ಅಂದಾಜು ಪಟ್ಟಿಯಲ್ಲಿರುವಂತೆ ಸಮರ್ಪಕವಾಗಿ ನಡೆದಿಲ್ಲ. ಗುಣಮಟ್ಟದ ವಸ್ತುಗಳ ಬಳಕೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆ ಕಾಮಗಾರಿ ನಡೆಸುತ್ತಿರುವ ಏಜೆನ್ಸಿಗೆ ಅಂದಾಜುಪಟ್ಟಿಯAತೆ ಹಾಗೂ ಮೇಲ್ವಿಚಾರಣೆಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ನಿರ್ದೇಶಿಸಬೇಕೆಂದು ಚೆಸ್ಕಾಂ ಹೇಳಿದೆ.

ಈ ಪತ್ರಕ್ಕೆ ನಗರಸಭೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಇಂಜಿನಿಯರ್ ಸಂಪತ್ ತಿಳಿಸಿದ್ದಾರೆ.