ಮಡಿಕೇರಿ, ಏ.೧೪; ಸಾಧಾರಣದವರಿಗೆ ಅಷ್ಟು ಸುಲಭಕ್ಕೆ ಅಲ್ಲಿಗೆ ತಲಪಲು ಸಾಧ್ಯವಾಗುವದಿಲ್ಲ., ಪ್ರಯತ್ನಿಸಿದರೂ ಮೊಣಕಾಲು ಎದೆಗೆ ತಾಗುವಷ್ಟರ ಮಟ್ಟಿಗಿನ ಬೆಟ್ಟ ಪ್ರದೇಶವನ್ನು ಏರಬೇಕು., ದುರ್ಗಮ ಹಾದಿಯಲ್ಲಿ ಕಾಡು ಪ್ರಾಣಿ, ಜಿಗಣೆಗಳ ಕಾಟವನ್ನೆದುರಿಸಿಕೊಂಡು ಮುಂದೆ ಸಾಗಿ ನಿಗದಿತ ಪ್ರದೇಶ ತಲುಪಬೇಕು.., ಅಷ್ಟರಲ್ಲಿ ಅರ್ಧ ಜೀವ ಹೋದ ಅನುಭವ ಆಗಿರುತ್ತದೆ..! ಇದು ಯಾವದೇ ಚಾರಣದ ಮಾರ್ಗವಲ್ಲ., ಭೂಮಿಯ ಒಡಲನ್ನು ಬಗೆದು ನಿಕ್ಷೇಪವನ್ನು ಹೊರತೆಗೆಯಲು ದಂಧೆಕೋರರು ಮಡಿಕೇರಿ, ಏ.೧೪; ಸಾಧಾರಣದವರಿಗೆ ಅಷ್ಟು ಸುಲಭಕ್ಕೆ ಅಲ್ಲಿಗೆ ತಲಪಲು ಸಾಧ್ಯವಾಗುವದಿಲ್ಲ., ಪ್ರಯತ್ನಿಸಿದರೂ ಮೊಣಕಾಲು ಎದೆಗೆ ತಾಗುವಷ್ಟರ ಮಟ್ಟಿಗಿನ ಬೆಟ್ಟ ಪ್ರದೇಶವನ್ನು ಏರಬೇಕು., ದುರ್ಗಮ ಹಾದಿಯಲ್ಲಿ ಕಾಡು ಪ್ರಾಣಿ, ಜಿಗಣೆಗಳ ಕಾಟವನ್ನೆದುರಿಸಿಕೊಂಡು ಮುಂದೆ ಸಾಗಿ ನಿಗದಿತ ಪ್ರದೇಶ ತಲುಪಬೇಕು.., ಅಷ್ಟರಲ್ಲಿ ಅರ್ಧ ಜೀವ ಹೋದ ಅನುಭವ ಆಗಿರುತ್ತದೆ..! ಇದು ಯಾವದೇ ಚಾರಣದ ಮಾರ್ಗವಲ್ಲ., ಭೂಮಿಯ ಒಡಲನ್ನು ಬಗೆದು ನಿಕ್ಷೇಪವನ್ನು ಹೊರತೆಗೆಯಲು ದಂಧೆಕೋರರು ಹರಳು ಕಲ್ಲು ದೋಚಿದ್ದಾರೆ. ಇಲ್ಲಿ ಜೀವಕ್ಕಿಂತ ಹಣವೇ ಮುಖ್ಯವೆಂಬದು ಗೋಚರಿಸುತ್ತದೆ..!
ಎರಡು ಹೆಣ ಬಿದ್ದಿದೆ..!
ಸುಟ್ಟತ್ ಮಲೆ ಹಾಗೂ ಸನಿಹದ ಕೂಜಿಮಲೆಯಲ್ಲಿ ಹರಳು ಕಲ್ಲು ದಂಧೆ ಆರಂಭವಾದಾಗ್ಗಿನಿAದ ಕಲ್ಲು ತೆಗೆಯುವ ವಿಚಾರದಲ್ಲಿ ಆಗಾಗ್ಗೆ ದಂಧೆಕೋರರ ನಡುವೆ ಜಗಳಗಳೂ ಆಗುತ್ತಿದ್ದವು. ಪೈಪೋಟಿಯೊಂದಿಗೆ ದಂಧೆ ನಡೆಯುತ್ತಿತ್ತು. ಹೀಗಾಗಿ ಕಲ್ಲಿಗಾಗಿ ಆಳವಾದ ಗುಂಡಿಗಳನ್ನು ಕೊರೆಯಲಾಗುತ್ತಿತ್ತು. ಹೀಗೇ ಗುಂಡಿಯೂ ಆಳವಾಗುತ್ತಿದ್ದಂತೆ ಮಣ್ಣು ಕುಸಿದು ಈರ್ವರು ಮಣ್ಣಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕೂಡ ಸಂಭವಿಸಿದೆ..!
ಗುAಡಿನ ಸದ್ದು..!
ಸಾವು ಸಂಭವಿಸಿದ ಬಳಿಕ ಕೆಲ ವರ್ಷ ಅಕ್ರಮ ಹರಳು ಕಲ್ಲು ದಂಧೆಗೆ ವಿರಾಮ ನೀಡಲಾಗಿತ್ತು. ಮತ್ತೆ ನಿಧಾನವಾಗಿ ಸದ್ದಿಲ್ಲದೆ ನಡೆಯುತ್ತಿ ರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಮಡಿಕೇರಿ ವಿಭಾಗದ ಅರಣ್ಯ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಗುಪ್ತ ಕಾರ್ಯಾಚರಣೆ ಮಾಡಿದ್ದರು. ಈ ಸಂದರ್ಭ ಸ್ಥಳದಲ್ಲಿ ದಂಧೆಯಲ್ಲಿ ನಿರತರಾಗಿದ್ದವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸಿ ಓರ್ವನನ್ನು ಸೆರೆ ಹಿಡಿದಿದ್ದರು. ಇನ್ನುಳಿದವರನ್ನು ನಂತರದಲ್ಲಿ ಬಂಧಿüಸಲಾಗಿತ್ತು. ಇದು ನಡೆದಿದ್ದು ೨೦೦೪-೦೫ರಲ್ಲಿ. ಬಳಿಕ ಗಣಿಗಾರಿಕೆ ನಿಂತಿತ್ತು.
ಗುAಡಿನ ಸದ್ದು ಕೇಳಿಸಿದ್ದರೂ., ಅಪಾಯವಿದೆ ಎಂಬ ಅರಿವಿದ್ದರೂ ಮತ್ತೆ ಅಕ್ರಮಕ್ಕೆ ಇಳಿದಿರುವದು ದುರಂತವೇ ಸರಿ..!
?ಸಂತೋಷ್, ಸುಧೀರ್