ಶನಿವಾರಸAತೆ, ಏ. ೧೪: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕನಿಗೆ ನ್ಯಾಯಾಲಯ ರೂ. ೧೨,೫೦೦ ದಂಡ ವಿಧಿಸಿದೆ.
ತಾ. ೮ ರಂದು ಶನಿವಾರಸಂತೆ ಪೊಲೀಸ್ ಠಾಣೆ ನಿರೀಕ್ಷಕÀ ಪರಶಿವಮೂರ್ತಿ, ಸಿಬ್ಬಂದಿಗಳಾದ ಡಿಂಪಲ್, ಸತೀಶ ಮತ್ತು ಕುಮಾರ್ ರವರು ಕೊಡ್ಲಿಪೇಟೆಯ ಶಾಂತಪುರ ಬಳಿ ವಾಹನ ತಪಾಸಣೆ ಮಾಡುವಾಗ ಹುಲ್ಲು ತುಂಬಿದ ಪಿಕಪ್ ವಾಹನದ ಚಾಲಕ ಕೃಷ್ಣ ಎಂಬವರು ಮದ್ಯಪಾನ ಮಾಡಿದ್ದು, ಈ ಸಂಬAಧ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ರೂ. ೧೨,೫೦೦ ದಂಡ ವಿಧಿಸಿ ತೀರ್ಪು ನೀಡಿದೆ.