ಮಡಿಕೇರಿ, ಏ. ೧೨: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬAಧಿಸಿದAತೆ ಇರುವ ಆ್ಯಪ್‌ನ ಸರ್ವರ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ತೆರಿಗೆ ಸ್ವೀಕರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ತಾ. ೧ ರಿಂದ ತೆರಿಗೆ ಸ್ವೀಕೃತಿ ಕಾರ್ಯ ಆರಂಭಗೊAಡಿದ್ದು, ಅಂದಿನಿAದಲೇ ಸರ್ವರ್ ಕೆಲಸ ನಿರ್ವಹಿಸುತ್ತಿಲ್ಲ. ಈ ನಡುವೆ ಪ್ರತಿನಿತ್ಯ ನಗರದ ನಾಗರಿಕರು ತೆರಿಗೆ ಪಾವತಿ ಮಾಡಲೆಂದು ನಗರಸಭೆ ಕಚೇರಿಗೆ ತೆರಳಿ ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ತೆರಿಗೆ ಸ್ವೀಕಾರ ಮಾಡುವ ಕಾರ್ಯ ಸ್ಥಗಿತಗೊಳಿಸಿರುವ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಿದ್ದಾರೆ.

ಅಲ್ಲದೆ, ತೆರಿಗೆ ಪಾವತಿಯ ಅವಧಿ ಮುಗಿದ ಬಳಿಕ ತಡವಾಗಿ ಪಾವತಿ ಮಾಡುವವರಿಗೆ ಶೇ. ೫ ರಷ್ಟು ದಂಡ ವಿಧಿಸುವ ಬಗ್ಗೆ ಆದೇಶದಲ್ಲಿದ್ದು, ಇದೀಗ ಸರ್ವರ್ ಸಮಸ್ಯೆಯಿಂದ ಸಹಜವಾಗಿ ತಡವಾಗಲಿದೆ. ಈ ಹಿನ್ನೆಲೆಯಲ್ಲಿ ಶೇ. ೫ ರಷ್ಟು ಹೆಚ್ಚುವರಿ ದಂಡ ವಿಧಿಸುವುದನ್ನು ಕೈಬಿಡಬೇಕೆಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವುದಾಗಿ ನಗರಸಭಾ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.