(ವಿಶೇಷ ವರದಿ,ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಏ. ೧೨: ಜಿಲ್ಲೆಯ ಆದಿವಾಸಿಗಳ ಆರೋಗ್ಯ ಕಾಪಾಡುವ ಹಿನೆÀ್ನಲೆಯಲ್ಲಿ ಕಳೆದ ೫ ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದಿದ್ದ ಸಂಚಾರಿ ಆರೋಗ್ಯ ಘಟಕದ ಸೇವೆಯು ಇದೀಗ ಸ್ಥಗಿತ ಗೊಂಡಿದೆ ಗಿರಿಜನ ಉಪಯೋಜನೆ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡದ ಜನರಿಗೆ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಸೇವೆಯನ್ನು ಒದಗಿಸಲಾಗುತಿತ್ತು. ವೀರಾಜಪೇಟೆ ತಾಲೂಕಿನ ಸುಮಾರು ೧೩೯ ಗಿರಿಜನ ಹಾಡಿಗಳಲ್ಲಿ ವಾಸಿಸುತ್ತಿದ್ದ ಜನರಿಗೆ ಈ ಸೇವೆಯು ಸುಲಲಿತವಾಗಿ ತಲುಪುತ್ತಿತ್ತು. ಆದಿವಾಸಿ ಸಮುದಾಯ ಜನಾಂಗದವರಿಗೆ ವೈದ್ಯಾಧಿಕಾರಿಗಳ ತಂಡ ಆರೋಗ್ಯ ಚಿಕಿತ್ಸೆ ಹಾಗೂ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪುತ್ತಿತ್ತು. ಹಾಡಿಗಳ ಜನರಿಗೆ, ಮಕ್ಕಳಿಗೆ ವಯಸ್ಕರಿಗೆ, ಗರ್ಭಿಣಿಯರು, ಅಂಗವಿಕಲರು, ಆರೋಗ್ಯ ಸೇವೆಯನ್ನು ಉಚಿತವಾಗಿ ಪಡೆಯುತ್ತಿದ್ದರು.
ಕೋವಿಡ್ ೧೯ರ ಸಮಯದಲ್ಲಿ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಸೇವಾ ಘಟಕ ಹಾಡಿಗಳಿಗೆ ತೆರಳಿ ಹಿಂದಿನAತೆ ಮುಂದುವರೆಯಲಿ
ಹಾಡಿಗಳಲ್ಲಿರುವ ಆದಿವಾಸಿಗಳಿಗೆ ಆರೋಗ್ಯ ಘಟಕದ ವತಿಯಿಂದ ಉತ್ತಮ ಸೇವೆ ಲಭಿಸುತ್ತಿತ್ತು. ವಾರಕ್ಕೊಮ್ಮೆ ವೈದ್ಯರ ತಂಡ ಹಾಡಿಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಇದರಿಂದ ದೂರದ ಆಸ್ಪತ್ರೆಗೆ ತೆರಳುವ ಸಮಸ್ಯೆ ದೂರವಾಗಿತ್ತು. ಇದೀಗ ಆರೋಗ್ಯ ಸೇವೆ ಆದಿವಾಸಿಗಳಿಗೆ ಲಭಿಸುತ್ತಿಲ್ಲ. ಕೂಡಲೇ ಇಲಾಖೆ ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಈ ಹಿಂದೆ ಇದ್ದಂತಹ ಆರೋಗ್ಯ ಸೇವೆಯನ್ನು ಆದಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವಂತಾಗಬೇಕು.
-ವೈ. ಎಂ.ರವಿ, ಅಧ್ಯಕ್ಷರು, ಯರವ ಸಮಾಜ ಕೊಡಗು ಜಿಲ್ಲೆ ಸ್ಥಗಿತಗೊಳಿಸಿದೆ.
ಆದಿವಾಸಿಗಳ ಆರೋಗ್ಯಕ್ಕೆ ಅನು ಕೂಲವಾಗಿದ್ದ ಈ ಯೋಜನೆಯು ಇದೀಗ ಜನರಿಂದ ದೂರವಾಗುವ ಲಕ್ಷಣಗಳು ಕಂಡು ಬಂದಿದೆೆ. ಹಾಡಿಗಳ ಜನರ ಮನೆ ಬಾಗಿಲಿಗೆ ಈ ಸೇವೆಯು ಲಭ್ಯವಾಗುತಿತ್ತು. ತಾಲೂಕಿನ ವಿವಿಧೆಡೆ ಇರುವ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೂ ಈ ಸೇವೆ ಲಭ್ಯವಾಗುತಿತ್ತು. ಇದೀಗ ಇದರಿಂದ ವಂಚಿತರಾಗುವAತಾಗಿದೆ. ಹಾಡಿ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ.
ಸಂಚಾರಿ ಘಟಕದಲ್ಲಿ ನುರಿತ ವೈದ್ಯರು, ಇಬ್ಬರು ಶುಶ್ರೂಷಕಿಯರು, ಔಷಧಿ ವಿತರಕರು, ಲ್ಯಾಬ್ ಟೆಕ್ನಿಷಿಯನ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಆ್ಯಂಬ್ಯುಲೆನ್ಸ್ ಚಾಲಕರು ಈ ಘಟಕದಲ್ಲಿ ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ತಾಲೂಕಿನ ಆದಿವಾಸಿಗಳು ವಾಸಿಸುವ ಲೈನ್ ಮನೆ ಹಾಗೂ ಹಾಡಿಗಳಿಗೆ ಭೇಟಿ ನೀಡಿ ಇವರ ಆರೋಗ್ಯ ವಿಚಾರಿಸುತ್ತಿದ್ದರು. ಈ ವೇಳೆ ಅಗತ್ಯವಿದ್ದವರಿಗೆ ಗುಣಮಟ್ಟದ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುತಿತ್ತು. ಪ್ರತಿ ಹಾಡಿಗಳಿಗೆ ಈ ವಾಹನದೊಂದಿಗೆ ನುರಿತ ವೈದ್ಯರು ವಾರಕೊಮ್ಮೆ ಭೇಟಿ ನೀಡುತ್ತಿದ್ದರು. ಇದೀಗ ಘಟಕದ ಸೇವೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಆದಿವಾಸಿಗಳಿಗೆ ವಾರಕ್ಕೊಮ್ಮೆ ಸಿಗುತ್ತಿದ್ದ ಆರೋಗ್ಯ ಘಟಕದ ಸೇವೆ ಇಲ್ಲದಂತಾಗಿದೆ.