ವೀರಾಜಪೇಟೆ, ಏ. ೧೨: ವೀರಾಜಪೇಟೆಯ ಗೌರಿಕೆರೆ ನಿವಾಸಿ ಮುನೀರ್ ಅವರ ಪುತ್ರ ತಸ್ಲಿನ್ (೪) ಮನೆಯ ಮಹಡಿಯಲ್ಲಿ ಆಟವಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಎಂದಿನAತೆ ಮಧ್ಯಾಹ್ನ ಮೂರು ಗಂಟೆಗೆ ಮಕ್ಕಳ ಜೊತೆಗೆ ಆಟವಾಡುತ್ತಿದ್ದ ಮಗು ಆಯ ತಪ್ಪಿ ಮಹಡಿಯಿಂದ ಕೆಳಗೆ ಬಿದ್ದಿದೆ. ಮಗು ಬಿದ್ದಿದ್ದನ್ನು ಗಮನಿಸಿದ ತಂದೆ ಮುನೀರ್ ಕೂಡ ಮಗುವನ್ನು ರಕ್ಷಣೆ ಮಾಡಲು
(ಮೊದಲ ಪುಟದಿಂದ) ಮಗುವಿನ ಜೊತೆಗೆ ಕೆಳಗೆ ಹಾರಿದ್ದಾರೆ, ಆದರೆ ಅಷ್ಟರಲ್ಲಿ ಮಗುವಿನ ತಲೆಗೆ ತೀವ್ರ ಸ್ವರೂಪದ ಪೆಟ್ಟಾದ ಕಾರಣ ಸ್ಥಳದಲ್ಲೇ ಜೀವ ಕಳೆದುಕೊಂಡಿದೆ. ಆದರೂ ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಯಿತು. ಆದರೆ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮಗುವಿನ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಮಗುವನ್ನು ರಕ್ಷಣೆ ಮಾಡಲು ಹಾರಿದ ಮಗುವಿನ ತಂದೆ ಮುನೀರ್ ಕಾಲಿಗೂ ಬಲವಾದ ಪೆಟ್ಟಾಗಿದೆ. ಮುನೀರ್ ಮತ್ತು ಫೌಸಿಹ ದಂಪತಿ ಮೂವರು ಮಕ್ಕಳಿದ್ದು ಈಗ ಮೃತಪಟ್ಟಿರುವ ಮಗು ಮೂರನೇ ಮಗುವಾಗಿತ್ತು. ಮಹಡಿ ಮೇಲಿನಿಂದ ಬಿದ್ದು ಮಗು ಸಾವು