ಕೂಡಿಗೆ, ಏ. ೮: ಯುಗಾದಿ ಹಬ್ಬದ ಪ್ರಯುಕ್ತ ಸುಂದರನಗರದ ರಾಯಲ್ ಪೈಂಟರ್ಸ್ ವತಿಯಿಂದ ನಡೆದ ರಾಜ್ಯಮಟ್ಟದ ಕೇರಂ ಪಂದ್ಯಾವಳಿಯ ಸಿಂಗಲ್ಸ್ನಲ್ಲಿ ಕುಶಾಲನಗರದ ನವಾಜ್ ಹಾಗೂ ಡಬಲ್ಸ್ನಲ್ಲಿ ಪರಮೇಶ್ ಮತ್ತು ಮಂಜುನಾಥ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ನವಾಜ್ ಅವರು ಸಿಂಗಲ್ಸ್ನಲ್ಲಿ ಪ್ರಥಮ ಬಹುಮಾನವಾಗಿ ಟ್ರೋಫಿ ಹಾಗೂ ಹತ್ತು ಸಾವಿರ ನಗದನ್ನು ಪಡೆದುಕೊಂಡರು. ಕೇರಂ ಡಬಲ್ಸ್ನಲ್ಲಿ ಸುಂದರನಗರದ ಪರಮೇಶ್ ಹಾಗೂ ಮಂಜುನಾಥ್ ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ರೂ. ೧೫ ಸಾವಿರ ನಗದನ್ನು ಪಡೆದುಕೊಂಡರು.
ರಾಜ್ಯಮಟ್ಟದ ಕೇರಂ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಕೆ.ಬಿ. ಷಂಶುದ್ದಿನ್, ಸುದೀಪ್ ಕುಮಾರ್ ಹಾಗೂ ಮಾಜಿ ಸೈನಿಕರಾದ ಪ್ರದೀಪ್ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಕೈಲಾಶ್, ಲೋಕೇಶ್, ಸ್ವಾಮಿ, ಕೃಷ್ಣಪ್ಪ, ಸಾಗರ್, ಮಹದೇವ್, ಮಂಜುನಾಥ್, ದಾಸ್, ಗಣೇಶ್ ಹಾಗೂ ಇನ್ನಿತರರು ಇದ್ದರು.