ಕುಶಾಲನಗರ, ಏ. ೮: ವಿದ್ಯಾರ್ಥಿ ಗಳಲ್ಲಿ ಸೇವಾ ಮನೋಭಾವ ರೂಢಿಸಿಕೊಂಡು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅರ್ಜುನ್ ಮೌರ್ಯ ಹೇಳಿದರು.

ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಆರಂಭವಾದ ಎನ್‌ಎಸ್‌ಎಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಗಳಲ್ಲಿ ಭೌತಿಕವಾಗಿ, ಮಾನಸಿಕವಾಗಿ ಹಾಗೂ ಶಾರೀರಿಕವಾದ ಬೆಳವಣಿಗೆಯ ಕೈಗನ್ನಡಿಯಾದ ಘಟಕ ಸಮಾಜದ ಹಿತ ಮತ್ತು ಕಲ್ಯಾಣ ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಶಿಕ್ಷಣವಂತರಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಸಮಾಜದಲ್ಲಿ ವಿದ್ಯಾವಂತರು ಎಸೆಯುವ ಕಸವನ್ನು ಶಿಕ್ಷಣ ಪಡೆಯದೇ ಇರುವ ಜನ ತೆಗೆಯುತ್ತಿದ್ದಾರೆ ಎಂದು ತಾವು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಶಿಕ್ಷಣವಂತರಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಸಮಾಜದಲ್ಲಿ ವಿದ್ಯಾವಂತರು ಎಸೆಯುವ ಕಸವನ್ನು ಶಿಕ್ಷಣ ಪಡೆಯದೇ ಇರುವ ಜನ ತೆಗೆಯುತ್ತಿದ್ದಾರೆ ಎಂದು ಕಾಲೇಜಿನ ಅಧೀಕ್ಷಕ ಮಹೇಶ್ ಅಮೀನ್, ಪಿ.ಯು. ವಿಭಾಗದ ಪ್ರಾಂಶುಪಾಲೆ ಕ್ಲಾರಾ ರೇಶ್ಮಾ, ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಎನ್.ಎನ್. ನಂಜಪ್ಪ, ಎನ್‌ಎಸ್‌ಎಸ್ ಘಟಕದ ಅಧಿಕಾರಿ ಮಂಜೇಶ್, ಕ್ರೀಡಾ ಉಪನ್ಯಾಸಕ ದೇವೇಂದ್ರ ಇದ್ದರು.