ಕುಶಾಲನಗರ, ಏ. ೮: ಶಾಲಾ ಬಾಲಕನೊಬ್ಬನ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಶಾಲನಗರ ಸಮೀಪದ ಹಾರಂಗಿ ಬಳಿಯ ಬೆಂಡೆ ಬೆಟ್ಟ ಹಾಡಿಯಲ್ಲಿ ನಡೆದಿದೆ.

ಶಾಲಾ ಬಾಲಕ ಮಂಜುನಾಥ್ (೧೫) ಎಂಬಾತ ನೇಣಿಗೆ ಶರಣಾಗಿದ್ದು ಬಾಲಕನ ಸಾವು ಅನುಮಾನಾಸ್ಪದವಾಗಿದೆ ಎಂದು ಶಂಕೆ ವ್ಯಕ್ತಪಡಿಸಿ ಸಂಬAಧಿಕರು ಪೊಲೀಸ್ ದೂರು ನೀಡಿದ್ದಾರೆ. ಬಾಲಕ ತನ್ನ ಅಜ್ಜ ಚಂದ್ರಶೇಖರ್ ಮತ್ತು ಅಜ್ಜಿ ಭಾರತಿ ಎಂಬವರೊAದಿಗೆ ವಾಸ ಇದ್ದು ಅವರೇ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಸಂಬAಧಿಕರು ಆರೋಪಿಸಿದ್ದಾರೆ.

ಬಾಲಕ ಮಂಜುನಾಥ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಇದು ಅನುಮಾನಾಸ್ಪದ ಸಾವು ಎಂದು ಸಂಬAಧಿಕರು ಮತ್ತು ಆತನ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. ಗುರುವಾರ ಮಧ್ಯಾಹ್ನ ವೇಳೆಗೆ ಬಾಲಕ ತನ್ನ ಸ್ನೇಹಿತರಿಗೆ ಫೋನ್ ಮೂಲಕ ಸಂಪರ್ಕ ಮಾಡಿದ್ದು, ಈ ವೇಳೆ ಸ್ನೇಹಿತರೊಂದಿಗೆ ತಾನು ಸಾಯುವುದಾಗಿ ಹೇಳಿರುವ ಬಗ್ಗೆ ಈತನ ಸ್ನೇಹಿತರು ಮಾಹಿತಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬAಧಿಸಿದAತೆ ಬಾಲಕನ ಮಾವ ಗಣೇಶ, ಅತ್ತೆ ಭಾಗ್ಯ ಹಾಗೂ ಸಂಬAಧಿ ಚಂದನ್ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಾವಿಗೆ ಆತನ ಅಜ್ಜ ಮತ್ತು ಅಜ್ಜಿ ಕಾರಣಕರ್ತರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದ್ದಾರೆ.

ಮೃತ ಬಾಲಕನ ಮೈಮೇಲೆ ಗಾಯದ ಕುರುಹುಗಳು ಕಂಡುಬAದಿದ್ದು, ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬAಧಿಸಿದAತೆ ಮೊಕದ್ದಮೆ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.