ಗೋಣಿಕೊಪ್ಪಲು, ಏ. ೮: ಆನೆ-ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆಯ ವತಿಯಿಂದ ಅಳವಡಿಸಲಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಸ್ಥಳಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುವಂತೆ ಎಚ್ಚರವಹಿಸಲು ಹಾಗೂ ನಿಗದಿತ ಸಮಯದ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.

ತಿತಿಮತಿ ಚೌಡಿಕಟ್ಟೆಯಿಂದ ಸುಳುಗೋಡು ಲಕ್ಷö್ಮಣತೀರ್ಥದವರೆಗೆ ಸುಮಾರು ೧೯ ಕಿ.ಮೀ. ವ್ಯಾಪ್ತಿಯಲ್ಲಿ ಆನೆ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡನ್ನು ಅಳವಡಿಸಲಾಗುತ್ತಿದ್ದು ಸುಮಾರು ೯ ಕಿ.ಮೀ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಕಳೆದ ಬಾರಿ ಗುತ್ತಿಗೆ ಕೈಗೆತ್ತಿಕೊಂಡಿದ್ದ ಗುತ್ತಿಗೆದಾರ ಸರಿಯಾದ ರೀತಿಯಲ್ಲಿ ಕಾಮಗಾರಿ ಪೂರೈಸದೆ ಇರುವ ಹಿನೆÀ್ನಲೆಯಲ್ಲಿ ಹಲವು ರೈಲ್ವೇ ಕಂಬಿಗಳಿಗೆ ಅಳವಡಿಸಿದ್ದ ನಟ್‌ಬೋಲ್ಟ್ಗಳು ಹಾಳಾಗಿದ್ದವು.

ಇವುಗಳನ್ನು ಹೊಸದಾಗಿ ಬದಲಾಯಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಳುಗೋಡು ಭಾಗದಲ್ಲಿ ೧ ಕಿ.ಮೀ. ಸುತ್ತಳತೆಯಲ್ಲಿ ಸುಳುಗೋಡು ಕ್ಲಬ್‌ನವರೆಗೆ ೬೫ ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದಲ್ಲಿ ಅಳವಡಿಸಿರುವ ಹ್ಯಾಂಗಿAಗ್ ಸೋಲಾರ್ ತಂತಿಯನ್ನು ಆಯಿರ ಸುಳಿ ಹಾಗೂ ಚೇಣಿಹಡ್ಲು ಭಾಗದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಳವಡಿಸಿ ಈ ಭಾಗದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟುವ ಕೆಲಸ ಮಾಡಲಾಗುವುದೆಂದು ನಾಗರಹೊಳೆ ಡಿಎಫ್‌ಓ ಮಹೇಶ್‌ಕುಮಾರ್, ಸಚಿವರಿಗೆ ವಿವರ ನೀಡಿದರು. ಗಿರಿಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾಮಗಾರಿಗಳನ್ನು ಪೂರೈಸುವಂತೆ ಸಚಿವರು ಸೂಚಿಸಿದರು.

ಭೇಟಿಯ ವೇಳೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಅರಣ್ಯ ಇಲಾಖೆಯ ರಾಜ್ಯ ವನ್ಯಜೀವಿ ವಿಭಾಗದ ಪಿಸಿಸಿಎಫ್ ವಿಜಯ್‌ಗೋಗಿ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ನಾಗರಹೊಳೆ ಡಿಎಫ್‌ಓ ಮಹೇಶ್‌ಕುಮಾರ್, ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಡಿಕೇರಿ ಡಿಎಫ್‌ಓ ಎ.ಟಿ. ಪೂವಯ್ಯ, ವೀರಾಜಪೇಟೆ ಡಿಎಫ್‌ಓ ಚಕ್ರಪಾಣಿ, ನಾಗರಹೊಳೆ ಡಿಎಫ್‌ಓ ಶಿವರಾಮ್ ಬಾಬು ಸೇರಿದಂತೆ ವಿವಿಧ ಅಧಿಕಾರಿಗಳಾದ ಎಸಿಎಫ್ ಗೋಪಾಲ್, ಎಸಿಎಫ್ ಉತ್ತಪ್ಪ, ಹುಣಸೂರು ಎಸಿಎಫ್ ಸತೀಶ್, ಆರ್‌ಎಫ್‌ಓಗಳಾದ ಅಶೋಕ್ ಹುನಗುಂದ ಕಿರಣ್‌ಕುಮಾರ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.