ಗೋಣಿಕೊಪ್ಪ ವರದಿ, ಎ. ೮ : ಹರೇಕೃಷ್ಣ ಅಂತಾರಾಷ್ಟಿçÃಯ ಕೃಷ್ಣಪ್ರಜ್ಞಾ ಸಂಘದ ವತಿಯಿಂದ ತಾ. ೧೦ ರಂದು ಶ್ರೀರಾಮ ವಿಜಯ ರಥೋತ್ಸವ ಕಾರ್ಯಕ್ರಮ ಗೋಣಿಕೊಪ್ಪದಲ್ಲಿ ಆಯೋಜಿಸಲಾಗಿದೆ.
ರಾಮ ನವಮಿ ಪ್ರಯುಕ್ತ ಸಂಜೆ ೪ ಗಂಟೆಗೆ ಉಮಾಮಹೇಶ್ವರಿ ದೇವಸ್ಥಾನದಿಂದ ಬೈಪಾಸ್ ಮೂಲಕ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ, ನಂತರ ದೇವಸ್ಥಾನ ಸಭಾಂಗಣದಲ್ಲಿ ರಾಮಚಂದ್ರ ಕಥಾ, ಸಾಂಸ್ಕೃತಿ ಕಾರ್ಯಕ್ರಮ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.