ಕೂಡಿಗೆ, ಏ. ೫: ಕಣಿವೆ ಶ್ರೀ ರಾಮ ಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ತಾ. ೧೦ ರಂದು ನಡೆಯುವ ವಾರ್ಷಿಕ ಬ್ರಹ್ಮ ರಥೋತ್ಸವ ಅಂಗವಾಗಿ ರಥದ ಸಿದ್ಧತೆ ಭರದಿಂದ ಸಾಗುತ್ತಿದೆ.
ಸಂಪ್ರದಾಯದAತೆ ಯುಗಾದಿ ಹಬ್ಬದ ದಿನದಂದು ಬ್ರಹ್ಮ ರಥವನ್ನು ಕೊಠಡಿಯಿಂದ ಹೊರ ತೆಗೆದು ಪೂಜೆ ಸಲ್ಲಿಸಿ ಜೋಡಣೆ ಕಾರ್ಯವನ್ನು ಸಮಿತಿಯ ಸದಸ್ಯರು ನೆರವೇರಿಸಿದರು. ಈ ಸಂದರ್ಭ ದೇವಾಲಯ ಅಧ್ಯಕ್ಷ ಕೆ.ಎನ್. ಸುರೇಶ್ ಕಾರ್ಯದರ್ಶಿ ಮಹದೇವ ಮಾಜಿ ಅಧ್ಯಕ್ಷ ನಂಜುAಡ ಸ್ವಾಮಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.