ಚೆಟ್ಟಳ್ಳಿ, ಏ. ೫: ಕಳೆದ ವಾರ ಸುರಿದು ತಂಪನೆರೆದ ಮಳೆಯಿಂದ ಬಿಸಿಲ ಬೇಗೆಗೆ ತತ್ತರಿಸಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನ ಚಿಗುರೊಡೆಯತೊಡಗಿದ್ದು, ಪರಿಣಾಮ ವನ್ಯಜೀವಿಗಳು ಹರುಷಗೊಂಡಿವೆ.
ನಾಗರಹೊಳೆಯ ಕಲ್ಲಹಳ್ಳ, ಆನೆಚೌಕೂರು, ವೀರನಹೊಸಹಳ್ಳಿ, ಹುಣಸೂರು, ಅಂತರಸAತೆ ಹಲವೆಡೆ ಕಳೆದ ವಾರ ಸುಮಾರು ೧.೫೦ ಇಂಚಿಗೂ ಹೆಚ್ಚು ಮಳೆ ಸುರಿದ ಪರಿಣಾಮ ಅರಣ್ಯವೆಲ್ಲ ತಂಪುಗೊAಡು ಚಿಗುರೊಡೆಯುತ್ತಾ ಹರಿಸಿನಿಂದ ಕಂಗೊಳಿಸುತ್ತಿದೆ.
ಜಿಂಕೆಗಳು, ಕಾಡಾನೆ, ಕಾಡೆಮ್ಮೆಗಳು ಅರಣ್ಯದ ರಸ್ತೆ ಬದಿಯಲ್ಲಿ ಮೇವನ್ನು ಸವಿಯುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.
ಮಳೆಯಿಂದಾಗಿ ಚಿಗುರೊಡೆಯುತ್ತಿರುವ ಅರಣ್ಯದಲ್ಲಿ ವನ್ಯಜೀವಿಗಳು ಹರ್ಷಗೊಂಡಿದ್ದು, ವನ್ಯಜೀವಿಗಳ ವೀಕ್ಷಣೆಗೆ ಸಫಾರಿಯ ಮೂಲಕ ಹಲವು ಬಾರಿ ತೆರಳುತ್ತಿದ್ದೇವೆಂದು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಅಪ್ಪನೆರವಂಡ ವಿನು ಕುಂಞಪ್ಪ ಹೇಳುತ್ತಾರೆ.
- ಪುತ್ತರಿರ ಕರುಣ್ ಕಾಳಯ್ಯ