ಸೋಮವಾರಪೇಟೆ, ಏ. ೫: ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳದ ಸ್ತಿçà ಶಕ್ತಿ ಭವನದಲ್ಲಿ ನವಜ್ಯೋತಿ ಸಂಘದ ೨೧ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ತಣ್ಣೀರುಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪಿ.ಎನ್. ಕುಸುಮಾವತಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ನವಜ್ಯೋತಿ ಸಂಘದ ಅಧ್ಯಕ್ಷೆ ಅನಿತಾ ದಿನೇಶ್ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಗ್ರಾ.ಪಂ. ಉಪಾಧ್ಯಕ್ಷ ಟಿ.ಆರ್. ಪ್ರವೀಣ್, ಸದಸ್ಯರಾದ ಅಶ್ವಿನಿ, ಕವಿತಾ, ಸಿಡಿಪಿಓ ಕಚೇರಿ ಅಧಿಕಾರಿ ಗುರುಬಸಮ್ಮ, ಶಿಕ್ಷಕರುಗಳಾದ ಉದಯ್, ರತ್ನಾವತಿ, ಶಾಂತ, ಸಂಘದ ಪದಾಧಿಕಾರಿ ದೇವಿಕಾ, ಶೀಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.