*ಗೋಣಿಕೊಪ್ಪ, ಏ. ೪: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸುಧಾರಣೆಗೆ ಬಂದಿದ್ದು ಕ್ಷೇತ್ರವಾರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ನಡೆಯಲಿದೆ. ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಬೇಗೂರು ಪೂಳೆಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ರೂ. ೧೦ ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡ ಡಾಂಬರೀಕರಣ ರಸ್ತೆಯನ್ನು ಭಕ್ತಾದಿಗಳ ಸೇವೆಗೆ ಸಮರ್ಪಿಸಿ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿಯವÀರಿಗೆ ದೇವಸ್ಥಾನದ ಆಡಳಿತ ಮಂಡಳಿ ನಡೆಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅತಿವೃಷ್ಟಿ ಹಾಗೂ ಕೊರೊನಾ ಸಂಕಷ್ಟ ಕಾಲ ದಿನಗಳಲ್ಲಿ ಸರ್ಕಾರದ ಆರ್ಥಿಕ ಸ್ಥಿತಿ ಬಹುತೇಕ ಕ್ಷೀಣಿಸಿತ್ತು. ಇದರಿಂದಾಗಿ ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಆರ್ಥಿಕ ಸುಧಾರಣೆಯನ್ನು ಕಂಡಿದೆ. ವಿಧಾನಸಭಾ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಘೋಷಿಸಿದಂತೆ ಹೆಚ್ಚಿನ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಮೂಲಕ ಮತ್ತು ವಿಶೇಷ ಅನುದಾನಗಳನ್ನು ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದೆಯೆಂದು ತಿಳಿಸಿದರು. ಕ್ಷೇತ್ರದ ಜನ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಲಿದೆ. ಜನರ ಬೇಡಿಕೆಯಂತೆ ಹಂತಹAತವಾಗಿ ಕ್ಷೇತ್ರವನ್ನು ನಿರಂತರವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಿಂತನೆ ಹರಿಸಲಾಗಿದೆ. ಶಾಸಕನಾಗಿರುವವರೆಗೆ ತನ್ನ ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನದೊಂದಿಗೆ ಕೆಲಸಗಳನ್ನು ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪೊನ್ನಂಪೇಟೆ ತಾಲೂಕು ನೂತನವಾಗಿ ರಚನೆಗೊಂಡಿದ್ದು, ಬಹಳಷ್ಟು ಕೆಲಸ ಕಾರ್ಯಗಳು ನಡೆಯಬೇಕಾಗಿವೆ. ಹಂತಹAತವಾಗಿ ತಾಲೂಕನ್ನು ಸುಧಾರಣೆಯತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ, ಸರ್ವೆ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕಚೇರಿ ನಿರ್ಮಾಣ ಸೇರಿ ತಾಲೂಕು ಮಟ್ಟದ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಚಿಂತನೆ ಹರಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವ ಪ್ರಯತ್ನ ನಡೆದಿದ್ದು, ಬೇಗೂರಿನಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿತಗೊಳ್ಳಲಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಕಳೆದ ೧೫-೨೦ ವರ್ಷಗಳ ಹಿಂದೆ ಇದ್ದ ಗ್ರಾಮೀಣ ಭಾಗದ ಪರಿಸ್ಥಿತಿ ಇಂದು ಸುಧಾರಣೆಯನ್ನು ಕಂಡುಕೊAಡಿದೆ. ಉತ್ತಮ ರಸ್ತೆಗಳು, ದೇವಸ್ಥಾನಗಳ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ಹೀಗೆ ಹಲವಾರು ಮೂಲ ಸೌಕರ್ಯಗಳ ವ್ಯವಸ್ಥೆ ಶೇ. ೯೦ರಷ್ಟು ಆಗಿದೆ. ಶಾಸಕರು ಈ ಕ್ಷೇತ್ರದ ಜನತೆಯ ಮೇಲೆ ಇಟ್ಟಿರುವ ಕಾಳಜಿ ಅಭಿವೃದ್ಧಿ ಕಾರ್ಯ ಹೆಚ್ಚು ನಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅತಿವೃಷ್ಟಿ ಸಮಯದಲ್ಲಿ ರೈತರಿಗೆ ಆತ್ಮಸ್ಥೆöÊರ್ಯ ತುಂಬುವ ನಿಟ್ಟಿನಲ್ಲಿ ರೂ.೩.೩೦ ಕೋಟಿ ನಿಧಿ ಸಂಗ್ರಹ ಮಾಡಿ ಬ್ಯಾಂಕಿನಲ್ಲಿ ಸಾಲ ಪಡೆದ ರೈತರ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಈ ಮೂಲ ಉದ್ದೇಶನ್ನಿಟ್ಟು ಡಿಸಿಸಿ ಬ್ಯಾಂಕ್ ವ್ಯವಹಾರ ನಡೆಸುತ್ತಿದೆ ಎಂದು ತಿಳಿಸಿದರು.
ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೂಳೆಮಾಡು ಈಶ್ವರ ದೇವಸ್ಥಾನದ ಅಧ್ಯಕ್ಷ ಬೊಳಿಯಂಗಡ ದಾದುಪೂವಯ್ಯ, ಹುದಿಕೇರಿ ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಹಾಗೂ ದೇವಸ್ಥಾನದ ಕಾರ್ಯದರ್ಶಿ ಚೇಂದಿರ ರಘುತಿಮ್ಮಯ್ಯ, ಉಪಾಧ್ಯಕ್ಷ ರಾಜಮುತ್ತಪ್ಪ, ತಕ್ಕ ಮುಖ್ಯಸ್ಥ ಮತ್ರಂಡ ಪೂಣಚ್ಚ, ಪ್ರಮುಖರಾದ ಚೋಡುಮಾಡ ಶ್ಯಾಮ್ಪೂಣಚ್ಚ, ಮಂಡಚAಡ ದಿನೇಶ್ಚಿಟ್ಟಿಯಪ್ಪ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ತಕ್ಕ ಮುಖ್ಯಸ್ಥರು ಗ್ರಾಮಸ್ಥರು ಹಾಜರಿದ್ದರು.