*ಗೋಣಿಕೊಪ್ಪ, ಏ. ೪: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ನಲವತ್ತಕ್ಕೂ ಹೆಚ್ಚು ಕಾಮಗಾರಿಗಳಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ ಬೋಪಯ್ಯ ಅವರು ಚಾಲನೆ ನೀಡಿದರು.
ರೂ.೧.೪೦ ಕೋಟಿ ಅನುದಾನದಲ್ಲಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ, ದೇವಸ್ಥಾನ, ಮಳೆ ಹಾನಿ ದುರಸ್ತಿ, ಶೌಚಾಲಯ ನಿರ್ಮಾಣ, ಪ್ರಾಥಮಿಕ ಶಾಲೆ ಅಮೃತ ಯೋಜನೆ, ಅಂಗನವಾಡಿ ಕಟ್ಟಡ, ಶಾಲಾ ಕೊಠಡಿ ಮೇಲ್ಚಾವಣಿ ದುರಸ್ತಿ, ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ, ಸರ್ಕಾರಿ ಪದವಿ ಪೂರ್ವ ಕಾಲೇಜು ಪೀಠೋಪಕರಣಗಳ ಖರೀದಿ, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ಮುಂಭಾಗ ಇಂಟರ್ಲಾಕ್ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು ೪ ಲಕ್ಷ ಅನುದಾನದಲ್ಲಿ ನೊಕ್ಯ ಹಾಲುಮತ ಕುಟುಂಬಸ್ಥರ ರಸ್ತೆ ಅಭಿವೃದ್ಧಿ, ೫ ಲಕ್ಷದಲ್ಲಿ ನೊಕ್ಯ ಬಸವೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, ೧೨ ಲಕ್ಷದಲ್ಲಿ ಮರೂರು ಸಂಪರ್ಕ ರಸ್ತೆ, ೫ ಲಕ್ಷದಲ್ಲಿ ವಿನಾಯಕ ನಗರ ರಸ್ತೆ, ೫ ಲಕ್ಷದಲ್ಲಿ ದೇವಮಚ್ಚಿ ಅಂಗನವಾಡಿ ರಸ್ತೆ, ೫ ಲಕ್ಷದಲ್ಲಿ ಕರಡಿಕೊಪ್ಪ ಎರಡನೇ ಅಡ್ಡ ರಸ್ತೆ, ೫ ಲಕ್ಷದಲ್ಲಿ ಶಾಂತಿನಗರ ರಸ್ತೆ, ೫ ಲಕ್ಷದಲ್ಲಿ ಕೋಣನಕಟ್ಟೆ ರಸ್ತೆಯಿಂದ ಕರಡಿಕೊಪ್ಪ ಮುತ್ತಪ್ಪ ದೇವಸ್ಥಾನ ರಸ್ತೆ, ೫ ಲಕ್ಷದಲ್ಲಿ ಆಸ್ಪತ್ರೆ ಮುಂಭಾಗ ಪದ್ಮನಂಜಪ್ಪ ಕುಟುಂಬಸ್ಥರ ರಸ್ತೆ, ೫ ಲಕ್ಷದಲ್ಲಿ ಕರಡಿಕೊಪ್ಪ ಟ್ಯಾಂಕ್ ರಸ್ತೆ, ೫ ಲಕ್ಷದಲ್ಲಿ ದೇವಮಚ್ಚಿ ಅಂಗನವಾಡಿಯಿAದ ಶಾಲೆ ರಸ್ತೆ, ೫ ಲಕ್ಷದಲ್ಲಿ ಕೋಣನ ಕಟ್ಟೆ ಸಂಪರ್ಕ ರಸ್ತೆ, ೩ ಲಕ್ಷದಲ್ಲಿ ಕರಡಿ ಕೊಪ್ಪ ಒಂದನೇ ಅಡ್ಡ ರಸ್ತೆ, ೬೦ ಸಾವಿರದಲ್ಲಿ ನೋಕ್ಯ ಗ್ರಾಮ ಶ್ರೀ ಕೃಷ್ಣ ಸಂಪರ್ಕ ರಸ್ತೆ, ೬೦ ಸಾವಿರದಲ್ಲಿ ಬಸವೇಶ್ವರ ದೇವಸ್ಥಾನ ರಸ್ತೆ ಮಳೆಹಾನಿ ದುರಸ್ತಿ, ೧.೮೦ ಲಕ್ಷದಲ್ಲಿ ಮರೂರು ರಸ್ತೆ ಮಳೆಹಾನಿ ದುರಸ್ತಿ, ೧.೮೦ ಲಕ್ಷದಲ್ಲಿ ಶಾಸಕರು ೪ ಲಕ್ಷ ಅನುದಾನದಲ್ಲಿ ನೊಕ್ಯ ಹಾಲುಮತ ಕುಟುಂಬಸ್ಥರ ರಸ್ತೆ ಅಭಿವೃದ್ಧಿ, ೫ ಲಕ್ಷದಲ್ಲಿ ನೊಕ್ಯ ಬಸವೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, ೧೨ ಲಕ್ಷದಲ್ಲಿ ಮರೂರು ಸಂಪರ್ಕ ರಸ್ತೆ, ೫ ಲಕ್ಷದಲ್ಲಿ ವಿನಾಯಕ ನಗರ ರಸ್ತೆ, ೫ ಲಕ್ಷದಲ್ಲಿ ದೇವಮಚ್ಚಿ ಅಂಗನವಾಡಿ ರಸ್ತೆ, ೫ ಲಕ್ಷದಲ್ಲಿ ಕರಡಿಕೊಪ್ಪ ಎರಡನೇ ಅಡ್ಡ ರಸ್ತೆ, ೫ ಲಕ್ಷದಲ್ಲಿ ಶಾಂತಿನಗರ ರಸ್ತೆ, ೫ ಲಕ್ಷದಲ್ಲಿ ಕೋಣನಕಟ್ಟೆ ರಸ್ತೆಯಿಂದ ಕರಡಿಕೊಪ್ಪ ಮುತ್ತಪ್ಪ ದೇವಸ್ಥಾನ ರಸ್ತೆ, ೫ ಲಕ್ಷದಲ್ಲಿ ಆಸ್ಪತ್ರೆ ಮುಂಭಾಗ ಪದ್ಮನಂಜಪ್ಪ ಕುಟುಂಬಸ್ಥರ ರಸ್ತೆ, ೫ ಲಕ್ಷದಲ್ಲಿ ಕರಡಿಕೊಪ್ಪ ಟ್ಯಾಂಕ್ ರಸ್ತೆ, ೫ ಲಕ್ಷದಲ್ಲಿ ದೇವಮಚ್ಚಿ ಅಂಗನವಾಡಿಯಿAದ ಶಾಲೆ ರಸ್ತೆ, ೫ ಲಕ್ಷದಲ್ಲಿ ಕೋಣನ ಕಟ್ಟೆ ಸಂಪರ್ಕ ರಸ್ತೆ, ೩ ಲಕ್ಷದಲ್ಲಿ ಕರಡಿ ಕೊಪ್ಪ ಒಂದನೇ ಅಡ್ಡ ರಸ್ತೆ, ೬೦ ಸಾವಿರದಲ್ಲಿ ನೋಕ್ಯ ಗ್ರಾಮ ಶ್ರೀ ಕೃಷ್ಣ ಸಂಪರ್ಕ ರಸ್ತೆ, ೬೦ ಸಾವಿರದಲ್ಲಿ ಬಸವೇಶ್ವರ ದೇವಸ್ಥಾನ ರಸ್ತೆ ಮಳೆಹಾನಿ ದುರಸ್ತಿ, ೧.೮೦ ಲಕ್ಷದಲ್ಲಿ ಮರೂರು ರಸ್ತೆ ಮಳೆಹಾನಿ ದುರಸ್ತಿ, ೧.೮೦ ಲಕ್ಷದಲ್ಲಿ ಪ್ರಾಥಮಿಕ ಶಾಲೆ ಕೊಠಡಿ ಮೇಲ್ಚಾವಣಿ ದುರಸ್ತಿ, ೨.೫೦ ಲಕ್ಷದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಇಂಟರ್ಲಾಕ್ ಅಳವಡಿಕೆ, ೨.೨೦ ಲಕ್ಷದಲ್ಲಿ ಬಾಲಕಿಯರ ನಿಲಯಕ್ಕೆ ಇಂಟರ್ಲಾಕ್ ಅಳವಡಿಕೆ, ೩ ಲಕ್ಷದಲ್ಲಿ ಪದವಿಪೂರ್ವ ಕಾಲೇಜು ಶೌಚಾಲಯ ನಿರ್ಮಾಣ ಮತ್ತು ಪಿಠೋಪಕರಣಗಳ ಖರೀದಿ, ೪ ಲಕ್ಷದಲ್ಲಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ, ೫ ಲಕ್ಷದಲ್ಲಿ ಮರೂರು ಕಾಲೋನಿಯಲ್ಲಿ ಸ್ವಸಹಾಯ ಸಂಘಗಳ ಶೆಡ್ ನಿರ್ಮಾಣ, ೧೨ ಲಕ್ಷದಲ್ಲಿ ಮತ್ತಿಗೋಡು ಹಾಗೂ ಹೆಬ್ಬಾಲೆ ಉಪಕೇಂದ್ರದ ದುರಸ್ಥಿ ಹಾಗೂ ಕ್ಷೇಮಕೇಂದ್ರದ ನಿರ್ಮಾಣಕ್ಕೆ ಸೇರಿದಂತೆ ಒಟ್ಟು ೧ ಕೋಟಿ ೪೦ ಲಕ್ಷ ಅನುದಾನವನ್ನು ಬಳಸಲಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಗ್ರಾಮೀಣಾಭಿವೃದ್ದಿ ಅನುದಾನವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಗ್ರಾ.ಪಂ. ಅಧ್ಯಕ್ಷೆ ಆಶಾ, ಸದಸ್ಯರುಗಳಾದ ಅನೂಪ್ಕುಮಾರ್, ಶಂಕರ, ಶೇಖರ್, ಸುಬ್ರು, ದೇವರಪುರ ಗ್ರಾ.ಪಂ. ಉಪಾಧ್ಯಕ್ಷ ಮನೆಯಪಂಡ ಮಹೇಶ್, ಕೃಷಿಪತ್ತಿನ ಸಹಕಾರದ ಸಂಘದ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ನಿರ್ದೇಶಕರುಗಳಾದ ಗೋವಿಂದ, ಗಣೇಶ, ಲಕ್ಷö್ಮಮ್ಮ, ಬಿಜೆಪಿ ಪಕ್ಷದ ಕಾರ್ಯಕರ್ತರುಗಳಾದ ಸಿದ್ದರಾಜು, ರವಿ, ಜಿ.ಪಂ. ಇಂಜಿನಿಯರ್ ಮಹಾದೇವ್ ಸೇರಿದಂತೆ ಹಲವರು ಹಾಜರಿದ್ದರು.