ನಾಪೋಕ್ಲು, ಏ. ೩: ಇತಿಹಾಸ ಪ್ರಸಿದ್ಧ ನಾಪೋಕ್ಲು ಗ್ರಾಮದ ಶ್ರೀ ಪೊನ್ನು ಮುತ್ತಪ್ಪ ದೇವರ ಹಬ್ಬವು ಆರಂಭವಾಗಿದ್ದು, ತಾ. ೪ ರಂದು ೩ ಗಂಟೆಗೆ ಪೈಂಗುತ್ತಿ, ಸಂಜೆ ೬ ಗಂಟೆಗೆ ಮುತ್ತಪ್ಪ ದೇವರ ಕಳಸ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳ ಚಂಡೆ ವಾದ್ಯದೊಂದಿಗೆ ನಗರದಲ್ಲಿ ಮೆರವಣಿಗೆ, ಮುತ್ತಪ್ಪ ದೇವರ ಬೊಳ್ಳಾಟ, ಪ್ರಾತಃ ಕಾಲ ೧ ಗಂಟೆಗೆ ಗುಳಿಗ ತೆರೆ, ಮತ್ತು ತಾ, ೫ ರಂದು ಬೆಳಿಗ್ಗೆ ೫ ಗಂಟೆಗೆ ಕುಟ್ಟಿಚಾತ ತೆರೆ, ೬ ಗಂಟೆಗೆ ತಿರೂಪನೆ ಮತ್ತು ಪೊನ್ನು ಮುತ್ತಪ್ಪ ತೆರೆ ಕೋಲ ನಡೆಯಲಿದೆ.