ಕೂಡಿಗೆ, ಏ.೩: ಇಲ್ಲಿಗೆ ಸಮೀಪದ ತೊರೆನೂರು ಶ್ರೀ ಬಸವೇಶ್ವರ ದೇವಾಲಯದಲ್ಲಿ ಯುಗಾಗಿ ಪ್ರಯುಕ್ತ ಹೊನ್ನಾರು ಉತ್ಸವವನ್ನು ಆಚರಿಸಲಾಯಿತು. ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿಕೊAಡು ದೇವಾಲಯ ಆವರಣಕ್ಕೆ ಬಂದು ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪಂಚಾAಗದ ರಾಶಿಯ ಪ್ರಕಾರ ಮೀನಾ ರಾಶಿಯವರು ಜೋಡಿ ಎತ್ತಿನಲ್ಲಿ ಹೊನ್ನಾರು ಕಟ್ಟಬಹುದು ಎಂಬ ಸಮಿತಿಯ ತೀರ್ಮಾನದಂತೆ ಈ ಬಾರಿ ಮೀನ ರಾಶಿಯ ಚಂದ್ರಶೇಖರ ಅವರು ತಮ್ಮ ಎತ್ತುಗಳನ್ನು ಸಿಂಗರಿ ಹೊಸ ಬಟ್ಟೆ ತೊಟ್ಟು ತಮ್ಮ ಜೋಡಿ ಎತ್ತುಗಳ ಮೂಲಕ ದೇವರ ಭೂಮಿಯಲ್ಲಿ ಸಂಪ್ರದಾಯದAತೆ ಪೂರ್ವದಿಂದ ಪಶ್ಚಿಮಕ್ಕೆ ಜೋಡೆತ್ತಿನ ಮೂಲಕ ದೇವಾಲಯ ಅರ್ಚಕ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವವು ಚಾಲನೆಗೊಂಡಿತು.
ಉತ್ಸವದಲ್ಲಿ ಗ್ರಾಮದ ೩೦ ಕ್ಕೂ ಅಧಿಕ ಜೋಡಿ ಎತ್ತುಗಳು ಸಿಂಗಾರಗೊAಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ತೊರೆನೂರು ಗ್ರಾಮದ ರಾಜ್ಯ ಹೆದ್ದಾರಿ ಸಮೀಪದಲ್ಲಿರುವ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಅವರವರ ಜಮೀನಿಗೆ ತೆರಳಿ ಹೊನ್ನಾರು ಉಳುಮೆ ಮಾಡಲಾಯಿತು. ಈ ಪದ್ಧತಿಯನ್ನು ಕಳೆದ ೬೦ ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಮಹಿಳೆಯರು ಬೀದಿಗಳಲ್ಲಿ ವಿವಿಧ ಬಣ್ಣದ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.
ಈ ಸಂದರ್ಭ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್ ಬಿ ಚಂದ್ರಪ್ಪ, ಕಾರ್ಯದರ್ಶಿ ಸೋಮಶೇಖರ ಅರ್ಚಾರಿ, ಉಪಾಧ್ಯಕ್ಷ ಟಿ.ವಿ. ಪ್ರಕಾಶ್, ಗೌರವಾಧ್ಯಕ್ಷ ಚಂದ್ರಶೇಖರ ಖಜಾಂಜಿ ಟಿ.ಸಿ. ಶಿವಕುಮಾರ್, ಗ್ರಾಮದ ಪ್ರಮುಖರಾದ ಟಿ.ಎಸ್. ಮಹೇಶ್, ಟಿ.ಬಿ. ಮಂಜುನಾಥ, ರವಿಚಂದ್ರನ, ಶಿವಕುಮಾರ್, ಪ್ರಕಾಶ್, ಕೂಡ್ಲೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ತೊರೆನೂರು ಗ್ರಾಮದ ಟಿ.ಜಿ. ಪ್ರೇಮಕುಮಾರ್, ಚಿದಾನಂದ ಸೇರಿದಂತೆ ಸಮಿತಿಯ ೨೦ ಆಡಳಿತ ಮಂಡಳಿಯ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು. ಸಮಿತಿಯ ವತಿಯಿಂದ ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಜೋಡೆತ್ತಿನ ರೈತರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಸಂಜೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಬಸವೇಶ್ವರ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.