ಮಡಿಕೇರಿ, ಏ. ೩: ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಕ್ಕಂದೂರು ಸಮೀಪ ಹೆಮ್ಮೆತ್ತಾಳುವಿನ ಅದಮ್ ಎಸ್ಟೇಟ್ನಲ್ಲಿ ನಿನ್ನೆ ದಿನ ಮಳೆಗೆ ಮರವೊಂದು ಬಿದ್ದಿದೆ. ಈ ವೇಳೆ ವಿದ್ಯುತ್ ಸ್ಥಗಿತಗೊಂಡಿತ್ತು. ಮರ ಬೀಳುವ ವೇಳೆ ಅದರ ಕೊಂಬೆಯೊAದು ವಿದ್ಯುತ್ ತಂತಿಗೆ ಸಿಕ್ಕಿಕೊಂಡಿತ್ತು ಎನ್ನಲಾಗಿದೆ.
ಈ ಬಗ್ಗೆ ಅರಿವಿಲ್ಲದ ಅಲ್ಲಿನ ಕಾರ್ಮಿಕರಾದ ಪಶ್ಚಿಮ ಬಂಗಾಳ ಮೂಲಕ ಸುರೇಶ್ ಹಾಗೂ ಅವಿನಾಶ್ ಎಂಬವರುಗಳು ಮರವನ್ನು ಕಡಿದು ತೆರವುಗೊಳಿಸಲು ಮುಂದಾಗಿದ್ದಾರೆ. ಈ ಸಂದರ್ಭ ಮಳೆಯಿಂದ ಸ್ಥಗಿತಗೊಂಡಿದ್ದ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಪ್ರವಹಿಸಲ್ಪಟ್ಟಿದ್ದು, ಮರ ಕಡಿಯುತ್ತಿದ್ದ ಸುರೇಶ್ (೩೦) ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ್ದಾನೆ. ಅವಿನಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.