ಕುಶಾಲನಗರ, ಏ.೩: ಕಾವೇರಿ ನದಿಗೆ ಈಜಲು ತೆರಳಿದ ಸಂದರ್ಭ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಕುಶಾಲನಗರ ಸಮೀಪದ ಆವರ್ತಿ ಗ್ರಾಮದ ಸುಂಕದಕಟ್ಟೆ ನಿವಾಸಿ ಚಂದ್ರು ಎಂಬವರ ಪುತ್ರ ದರ್ಶನ್ (೧೭) ಮೃತ ದುರ್ದೈವಿ.

ದರ್ಶನ್ ತನ್ನ ಮೂವರು ಸಂಗಡಿಗರೊAದಿಗೆ ನದಿಗೆ ಈಜಲು ತೆರಳಿದ ಸಂದರ್ಭ ಘಟನೆ ಸಂಭವಿಸಿದೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ನದಿ ಸುಳಿಯಲ್ಲಿ ಸಿಲುಕಿದ್ದ ಮೂವರು ಯುವಕರನ್ನು ಸ್ಥಳೀಯರು ನೀರಿನಿಂದ ಹೊರಗೆ ತೆಗೆದಿದ್ದಾರೆ. ದರ್ಶನ್ ದೇಹವನ್ನು ಕುಶಾಲನಗರ ಅಗ್ನಿಶಾಮಕ ತಂಡದ ಸದಸ್ಯರು ನದಿಯಿಂದ ಹೊರತಂದಿದ್ದಾರೆ.

ಮೃತಯುವಕ ಅಲ್ಲಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಘಟನೆಗೆ ಸಂಬAಧಿಸಿದAತೆ ಬೈಲುಕೊಪ್ಪೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.