ಶ್ರೀಮಂಗಲ, ಏ. ೩: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ಕಿತ್ತ್ ಶ್ರೀ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಮಾರ್ಚ್ ೨೪ರಂದು ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭವಾಗಿದ್ದು, ತಾ. ೩೦ರಂದು ವಿಜೃಂಭಣೆಯಿAದ ಸಮಾರೋಪಗೊಂಡಿತು.
೨೫ರAದು ಊರ್‌ಬೊಳಕ್, ೨೬, ೨೭, ೨೮ರಂದು ಪರಕೆ ಬೊಳಕ್, ೨೯ರಂದು ನೆರ್ಪು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ತಾ. ೩೦ರಂದು ಪೂರ್ವಾಹ್ನದಿಂದಲೇ ವಿವಿಧ ರೀತಿಯ ಪೂಜಾ ಕೈಂಕರ್ಯಗಳು, ಮಹಾಪೂಜೆ, ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ದರ್ಶನ, ದೇವರ ಅವಭೃತ ಸ್ನಾನ, ಸಂಜೆ ೭ ಗಂಟೆಯಿAದ ದೇವರ ನರ್ತನ, ವಸಂತ ಪೂಜೆ ಹಾಗೂ ಅನ್ನದಾನದೊಂದಿಗೆ ಹಬ್ಬದ ಸಮಾರೋಪವು ವಿಜೃಂಭಣೆಯಿAದ ನಡೆಯಿತು.
ರಾತ್ರಿ ೭ ಗಂಟೆಗೆ ದೇವರ ನೃತ್ಯದ ಸಂದರ್ಭ ಭಾರೀ ಗಾಳಿ, ಮಳೆ ಇದ್ದರೂ ಕೂಡ ಮಹಿಳೆ, ಮಕ್ಕಳಾದಿಯಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.
ದೇವಸ್ಥಾನ ತಕ್ಕ ಮುಖ್ಯಸ್ಥ ಚೆಟ್ಟಂಗಡ ನಾಣಯ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್, ಸಮಿತಿ ಸದಸ್ಯರು ಹಾಗೂ ಅರ್ಚಕ ಜಯಂತ್‌ರವರ ಮುಂದಾಳತ್ವದಲ್ಲಿ ಉತ್ಸವವು ನಡೆಯಿತು.