ಕುಶಾಲನಗರ, ಏ. ೩: ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರ್ಲಕೋಟಿ ಮೋಟಯ್ಯ (೯೦) ಆತ್ಮಹÀತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಮಗನೊಂದಿಗೆ ಕೊಪ್ಪದಲ್ಲಿ ನೆಲೆಸಿದ್ದ ಮೋಟಯ್ಯ ಅವರು, ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಬಂದೂಕಿನಿAದ ಗುಂಡು ಹಾರಿಸಿ ಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಸಾವಿಗೆ ಕಾರಣ ಎನ್ನಲಾಗಿದ್ದು, ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.