ಸಿದ್ದಾಪುರ, ಏ. ೧: ನದಿಯಿಂದ ಮರಳು ತೆಗೆಯಲು ಪರವಾನಗಿ ಪಡೆದುಕೊಂಡಿರುವ ವ್ಯಕ್ತಿಯೋರ್ವರು ಮರಳು ಸಾಗಾಟ ಮಾಡಲು ಅಕ್ರಮವಾಗಿ ನದಿ ತಟವನ್ನು ಸಮತಟ್ಟು ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಾಬು ವರ್ಗೀಸ್ ಹೇಳಿದ್ದಾರೆ.
ನೆಲ್ಯಹುದಿಕೇರಿಯ ಕುಂಬಾರಗುAಡಿಯಲ್ಲಿ ಹೆಚ್. ಎನ್. ಸತೀಶ್ ಎಂಬವರು ಸ.ನಂ.೧೦೫,೧೦೬ರಲ್ಲಿ ಮರಳು ತೆಗೆಯಲು ಸರಕಾರದಿಂದ ಪರವಾನಗಿ ಪಡೆದುಕೊಂಡಿದ್ದಾರೆ. ಆದರೆ, ಇದೀಗ ಸ.ನಂ. ೮೮,೮೯ರಲ್ಲಿ ಮರಳು ತೆಗೆದು ಸಾಗಾಟ ಮಾಡಲು ನದಿ ತಟವನ್ನು ಸಮತಟ್ಟು ಮಾಡಿ ಸಿದ್ಧತೆ ಮಾಡಿಕೊಂಡಿರುವದಾಗಿ ಗ್ರಾಮಸ್ಥರು ಆರೋಪಿಸಿದಲ್ಲದೆ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಧ್ಯಕ್ಷರನ್ನು ಒತ್ತಾಯಿಸಿದ್ದರು. ಈ ಸಂಬAಧ ಪ್ರತಿಕ್ರಿಯಿಸಿರುವ ಅಧ್ಯಕ್ಷ ಸಾಬು ವರ್ಗೀಸ್ ಕುಂಬಾರ ಗುಂಡಿ ವ್ಯಾಪ್ತಿಯಲ್ಲಿ ಸಿದ್ಧತೆ ನಡೆಸಿ ನದಿ ದಡವನ್ನು ಸಮತಟ್ಟು ಮಾಡಿರುವದು ಕಾನೂನು ಬಾಹಿರವಾಗಿದೆ. ಸ.ನಂ. ೧೦೫, ೧೦೬ರಲ್ಲಿ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಆದರೆ, ಗ್ರಾ.ಪಂ.ಗೆ ಯಾವದೇ ಮಾಹಿತಿ ನೀಡದೆ ಸ.ನಂ.೮೮, ೮೯ರಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ, ನದಿ ತಟದ ನಿವಾಸಿಗಳಿಗೆ ತೊಂದರೆ ಉಂಟು ಮಾಡುವ ಯಾವದೇ ಕೆಲಸಕ್ಕೆ ಪಂಚಾಯ್ತಿ ಅವಕಾಶ ನೀಡುವದಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದ್ದಾರೆ.