ಮಡಿಕೇರಿ, ಮಾ. ೩೧: ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ ರಾಜ್ಯ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು, ಕೊಡಗಿನ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ಮೊದಲ ಕೃತಿ ಕೂರ್ಗ್ ರೆಜಿಮೆಂಟ್ ಕಥಾಸಂಕಲನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ನಿಧಿ ಬಹುಮಾನ ದೊರಕಿದೆ. ಕೊಡಗು ಮತ್ತು ಸೈನಿಕರ ಕಥೆಗಳನ್ನು ಒಳಗೊಂಡಿರುವ ಈ ಕಥಾಸಂಕಲನವು ಓದುಗವಲಯದಲ್ಲಿಯೂ ಜನಮನ್ನಣೆ ಗಳಿಸಿತ್ತು.