ಶ್ರೀಮAಗಲ, mಂ. ೩೧: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತಾ. ೧೫ರಿಂದ ೨೫ರವರೆಗೆ ಟಿ.ಶೆಟ್ಟಿಗೇರಿಯ ರಾಯಲ್ ಕ್ರಿಕೆಟ್ ಕ್ಲಬ್ನಿಂದ ೨ನೇ ವರ್ಷದ ಕೊಡವ ಕುಟುಂಬ ತಂಡಗಳಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ರಾಯಲ್ ಕ್ರಿಕೆಟ್ ಕ್ಲಬ್ನ ಪ್ರಮುಖರು ತಿಳಿಸಿದ್ದಾರೆ.
ಟಿ.ಶೆಟ್ಟಿಗೇರಿಯಲ್ಲಿ ಕ್ಲಬ್ನ ಕಚೇರಿಯಲ್ಲಿ ಈ ಬಗ್ಗೆ ಸಭೆ ನಡೆಸಿ ಮಾಹಿತಿ ನೀಡಿದ ಕ್ಲಬ್ನ ಪ್ರಮುಖರು ಜಿಲ್ಲೆಯಲ್ಲಿ ಸತತವಾಗಿ ಮೂರು ವರ್ಷ ಪ್ರಾಕೃತಿಕ ವಿಕೋಪದ ಸಾವು ನೋವಿನಿಂದ ಮತ್ತು ಕೋವಿಡ್ ೧೯ ಸಾಂಕ್ರಾಮಿಕ ರೋಗದ ಕಾರಣದಿಂದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವವು ಸ್ಥಗಿತಗೊಂಡಿದ್ದು,
(ಮೊದಲ ಪುಟದಿಂದ) ಕ್ರೀಡಾಭಿಮಾನಿಗಳಿಗೆ ನಿರಾಸೆಯಾಗಿತ್ತು. ಹಾಗಾಗಿ ಕ್ಲಬ್ನ ವತಿಯಿಂದ ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರಸಕ್ತ ವರ್ಷ ಇದುವರೆಗೆ ೬೦ ಕೊಡವ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿದ್ದು, ೧೦೦ ಕೊಡವ ಕುಟುಂಬಗಳ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ತಾ. ೮ ರವರೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನೋಂದಾವಣೆಗಾಗಿ ಮೊ. ೯೬೬೩೨೯೫೪೫೬, ೭೦೨೨೪೬೨೯೬೧ ಸಂಪರ್ಕಿಸಬಹುದೆAದು ತಿಳಿಸಿದರು.
ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ರೂ. ೩೦ ಸಾವಿರ ನಗದು ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ ೧೦ ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು.
ಇದಲ್ಲದೇ ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದಿ ಸೀರೀಸ್, ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಫೀಲ್ಡರ್ಗೆ ವಿಶೇಷ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು ಹಾಗೂ ಪ್ರತಿ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕ್ಲಬ್ ಅಧ್ಯಕ್ಷ ಚೊಟ್ಟೆಯಂಡಮಾಡ ದಯಾಪೆಮ್ಮಯ್ಯ, ಪದಾಧಿಕಾರಿಗಳಾದ ಕೊಟ್ಟಂಗಡ ಅಪ್ಪಣ್ಣ, ಮಾಯಮಡ ಪ್ರಶಾಂತ್, ಚೊಟ್ಟೆಯಂಡಮಾಡ ಸಚಿನ್, ನೂರೇರ ಬೋಪಣ್ಣ, ಚೊಟ್ಟೆಯಂಡಮಾಡ ಲಿಖಿತ್ ಹಾಜರಿದ್ದರು.