ಚೆಟ್ಟಳ್ಳಿ, ಮಾ. ೩೦: ಅಮ್ಮತ್ತಿಯ ಕೊಂಗAಡ ಗಗನ್ ಕರುಂಬಯ್ಯ ಇಂಡಿಯನ್ ನ್ಯಾಷನಲ್ ರ‍್ಯಾಲಿಯ ಎರಡನೆ ಕ್ಯಾಟಗರಿಯಲ್ಲಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ ಒವರಾಲ್ ಚಾಂಪಿಯನ್ ಶಿಪ್‌ನ ಎರಡನೇ ಬಹುಮಾನವನ್ನು ಪಡೆದಿದ್ದಾರೆ. ಚೆನ್ನೆöÊ, ಆಂಧ್ರಪ್ರದೇಶ, ಕೊಯಮತ್ತೂರ್, ಬೆಂಗಳೂರು ನಂತರ ಹಲವೆಡೆ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿಯಲ್ಲಿ ದೇಶದ ೪೪ ನುರಿತ ಕ್ರೀಡಾಪಟುಗಳು ಭಾಗವಹಿಸಿದ ರ‍್ಯಾಲಿ ಕ್ರೀಡೆಯಲ್ಲಿ ಚೆನ್ನೆöÊನಲ್ಲಿ ನಡೆದ ಎರಡು ದಿನಗಳ ೪೪ನೇ ಸೌತ್ ಇಂಡಿಯಾ ರ‍್ಯಾಲಿಯಲ್ಲಿ ೫ ಹಂತಗಳಲ್ಲಿ ಅಪಾಯಕಾರಿ ರಸ್ತೆಗಳಲ್ಲಿ ಅತೀವೇಗದಲ್ಲಿ ದಿನಕ್ಕೆ ೮೦ ಕಿಮಿನಂತೆ ಎರಡು ದಿನ ಒಟ್ಟು ಸುಮಾರು ೧೫೦ ಕಿಮೀ ಶ್ರಮಿಸಬೇಕಿತ್ತು. ಮಂಗಳೂರಿನ ನುರಿತ ರ‍್ಯಾಲಿಪಟು ಡೀನ್ ಮಸ್ಕಾರೇನಲ್ (ಡ್ರೆöÊವರ್) ಹಾಗೂ ಕೊಂಗAಡ ಗಗನ್ ಕರುಂಬಯ್ಯ ಜೋಡಿ ಜೆಕೆ ಟಯರ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಪೋಲೋ ಕಾರಿನೊಂದಿಗೆ ಉತ್ತಮ ರೋಚಕ ಪ್ರದರ್ಶನ ನೀಡಿದರು. ಎರಡನೇ ಕ್ಯಾಟಗರಿಯಲ್ಲಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ ಒವರಾಲ್ ಚಾಂಪಿಯನ್ ಶಿಪ್‌ನ ಎರಡನೇ ಬಹುಮಾನವನ್ನು ಪಡೆಯುವ ಮೂಲಕ ಆಕರ್ಷಕ ಟ್ರೋಫಿ ಹಾಗೂ ಒಟ್ಟು ಒಂದು ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಜಿಪ್ಸಿ ಕ್ಲಾಸ್‌ನಲ್ಲಿ ಮೇಕೇರಿರ ಕಾರ್ಯಪ್ಪ (ಡ್ರೆöÊವರ್) ಹಾಗೂ ಮೇಕೇರಿರ ಅಭಿನವ್ (ಕೋಡ್ರೆöÊವರ್), ಐನ್‌ಆರ್‌ಸಿ-೩ನ ಪೋಲೋ ಕ್ಲಾಸ್‌ನಲ್ಲಿ ಅಮ್ಮತ್ತಿಯ ಉದ್ದಪಂಡ ತಿಮ್ಮಣ್ಣ (ತಿಮ್ಮು) (ಕೋಡ್ರೆöÊವರ್) ರ‍್ಯಾಲಿಯಲ್ಲಿ ಭಾಗವಹಿಸಿ ಹಲವು ಹಂತಗಳ ಗುರಿ ಮುಟ್ಟಿಸಿದರು. ೨೦೧೯ರಲ್ಲಿ ಇಂಡಿಯನ್ ನ್ಯಾಷನಲ್ ರ‍್ಯಾಲಿಯ ಎಸ್‌ಯು ವಿಕ್ಲಾಸ್‌ನಲ್ಲಿ ರ‍್ಯಾಲಿ ಚಾಂಪಿಯನ್‌ನಲ್ಲಿ ಗಗನ್ ಕರುಂಬಯ್ಯ ಹಾಗೂ ಉದ್ದಪಂಡ ತಿಮ್ಮಣ್ಣ ಗೆಲುವನ್ನು ಸಾಧಿಸಿದ್ದು, ರ‍್ಯಾಲಿಪಟ್ಟು ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ ಅವರ ಜೊತೆಗೂಡಿ ಹತ್ತು ಹಲವು ರ‍್ಯಾಲಿಯಲ್ಲಿ ಭಾಗವಹಿಸಿ ಗೆಲುವನ್ನು ಸಾಧಿಸಿದ್ದಾರೆ. - ಪುತ್ತರಿರ ಕರುಣ್ ಕಾಳಯ್ಯ