ಕೂಡಿಗೆ, ಮಾ. ೩೦: ಕೇಂದ್ರ ಸರ್ಕಾರ, ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ ಮತ್ತು ರಾಷ್ಟಿçÃಯ ಜೇನು ಮಂಡಳಿಯ ವತಿಯಿಂದ ರಾಷ್ಟಿçÃಯ ಮಟ್ಟದಲ್ಲಿ ಜೇನು ಕೃಷಿ ಅಭಿವೃದ್ಧಿಪಡಿಸುವ ಹಿನ್ನೆಲೆ ಹಾಲು ಒಕ್ಕೂಟದ ಮೂಲಕ ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತ್ತು ಗ್ರಾಮದ ರೈತರಿಗೆ ಜೇನು ಕೃಷಿ ತರಬೇತಿ ಮತ್ತು ಅಭಿವೃದ್ಧಿ ಪಡಿಸುವ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಗತಿಗೆ ರಾಜ್ಯದ ಮೂರು ಹಾಲು ಒಕ್ಕೂಟಗಳನ್ನು ಗುರುತಿಸಿದೆ. ಒಕ್ಕೂಟದ ಮೂಲಕ ಒಂದೊAದೂ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಜೇನು ಕೃಷಿಗೆ ಅನುಕೂಲವಾಗುವ ರೀತಿಯಲ್ಲಿ ಹಾಸನ ಹಾಲು ಒಕ್ಕೂಟವು ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಮಟ್ಟದಲ್ಲಿ ವಿವಿಧ ಸಭೆಗಳು ನೆಡೆದು ಕೊನೆಯಲ್ಲಿ ದೇಶದಲ್ಲಿ ಹೈನುಗಾರಿಕೆ ತಳಮಟ್ಟದ ರೈತರಿಂದ ಪ್ರಗತಿ ಹಂತವನ್ನು ಕಾಣುತ್ತಿದೆ. ಅದೇ ಮಾದರಿಯಲ್ಲಿ ಜೇನು ಕೃಷಿ ಪ್ರಗತಿ ಸಾಧಿಸಲು ಹೈನುಗಾರಿಕೆಯ ಒಕ್ಕೂಟಗಳಿಂದ ಸಾಧ್ಯ ಎಂದು ಕೇಂದ್ರ ಸರ್ಕಾರದ ಮಟ್ಟದ ಅಧಿಕಾರಿಗಳು ತಿಳಿದು, ರಾಜ್ಯದ ಮೂರು ಹಾಲು ಒಕ್ಕೂಟಗಳಿಗೆ ಆಯಾ ವ್ಯಾಪ್ತಿಯ ಒಂದೊAದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಹಾಲು ಒಕ್ಕೂಟದ ಮೂಲಕ ಜಿಲ್ಲೆಯ ಹಾಲು ಸಹಕಾರ ಸಂಘಗಳ ಸದಸ್ಯರುಗಳಿಗೆ ಮತ್ತು ಗ್ರಾಮದ ರೈತರಿಗೆ ಜೇನು ಕೃಷಿ ತರಬೇತಿ ನೀಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಲು ಬೇಕಾಗುವ ತರಬೇತಿಯನ್ನು ನೀಡುವಂತೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟ, ಶಿವಮೊಗ್ಗ ಹಾಲು ಒಕ್ಕೂಟ, ಬಾಗಲಕೋಟ ಹಾಲು ಒಕ್ಕೂಟಗಳನ್ನು ಕೇಂದ್ರ ಸರ್ಕಾರದ ಆಯ್ಕೆ ಮಾಡಿಕೊಂಡಿದೆ. ಅದರಂತೆ ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿಯ ತೀರ್ಮಾನದಂತೆ ಒಕ್ಕೂಟಕ್ಕೆ ಒಳಪಡುವ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹಾಸನ ಹಾಲು ಒಕ್ಕೂಟ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ಕೂಡಿಗೆಗೆ ಆಗಮಿಸಿದ ಸಂದರ್ಭ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಅನೇಕ ಜೇನು ಕೃಷಿ ರೈತರು ಮತ್ತು ಸಂಘಗಳು ಇವೆ. ಇದರ ಜೊತೆಯಲ್ಲಿ ಜೇನು ಸಾಕಾಣಿಕೆಗೆ ಉತ್ತಮವಾದ ಪ್ರದೇಶವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಜೊತೆಗೆ ಆಯಾ ವ್ಯಾಪ್ತಿಯ ರೈತರಿಗೆ ಜೇನು ಕೃಷಿ ತರಬೇತಿಯನ್ನು ನೀಡುವ ಯೋಜನೆಗಳು ಈಗಾಗಲೇ ಆರಂಭವಾಗಿವೆ. ಇದರ ಮೂಲಕ ಸ್ಥಳೀಯ ರೈತರು ಜೇನು ಕೃಷಿ ಸಾಕಾಣಿಕೆಯ ವಿವಿಧ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದು ಮುಖ್ಯ ಕಸುಬಿನ ಜೊತೆಗೆ ಉಪ ಕಸುಬನ್ನಾಗಿ ಮಾಡಿಕೊಂಡು ಜೇನನ್ನು ಉತ್ಪಾದನೆ ಮಾಡಲು ಬೇಕಾಗುವ ಎಲ್ಲಾ ಸಹಕಾರ ಸಂಬAಧಿಸಿದ ಇಲಾಖೆಯ ಮೂಲಕ ನೀಡಲಾಗುವುದೆಂದು ತಿಳಿಸಿದ್ದಾರೆ.

ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸಂಘಗಳು ಪ್ರಗತಿ ಹೊಂದುವ ಜೊತೆಗೆ ರೈತರು ಸಹ ಆರ್ಥಿಕವಾಗಿ ಮುಂದುವರಿ ಯುತ್ತಿದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ರೈತರು ಹಾಲಿನ ಜೊತೆಗೆ ಜೇನು ಕೃಷಿ ಮಾಡಿ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ವಾಗುವುದು ಎಂಬ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಪ್ರಪ್ರಥಮ ಡೈರಿ ಎಂಬ ಹೆಗ್ಗಳಿಕೆ ಇರುವ ಕೂಡಿಗೆ ಡೈರಿಯನ್ನು ನೂತನ ಆಧುನಿಕ ಯಂತ್ರ ಅಳವಡಿಕೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಣ್ಣ ಅವರು ಮುಂದಿನ ದಿನಗಳಲ್ಲಿ ಭೇಟಿ ನೀಡುವ ಸಂಭವ ಇದ್ದು, ನಂತರದ ದಿನಗಳಲ್ಲಿ ಹೊಸ ಕ್ರಿಯಾ ಯೋಜನೆಯನ್ನು ತಯಾರಿಸಿ ನೂತನ ಕಟ್ಟಡ ಜೊತೆಗೆ ಜಿಲ್ಲೆಯ ಹಾಲು ಗ್ರಾಹಕರಿಗೆ ಮತ್ತು ಉತ್ಪಾದಕರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಯೋಜನೆ ಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಒಕ್ಕೂಟದ ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಹಾಜರಿದ್ದರು.

- ಕೆ.ಕೆ. ನಾಗರಾಜಶೆಟ್ಟಿ.