ಶನಿವಾರಸಂತೆ, ಮಾ. ೩೦: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು.
ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಅವಧಿ ಮೀರಿರುವ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ನಡೆಸುವಂತೆ ಅದರ ಬಗ್ಗೆ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಯಿತು. ಪಂಚಾಯಿತಿ ಸದಸ್ಯ ಎಸ್.ಎನ್. ರಘು ಅವರು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿಗೆ ಬರಬೇಕಾಗಿರುವ ಎನ್.ಓ.ಸಿ. ನವೀಕರಣ, ಕೋಳಿ ಮಾಂಸ ಅಂಗಡಿಗಳ ನವೀಕರಣ, ಕಂದಾಯ ಬಾಪ್ತನ್ನು ಏಪ್ರಿಲ್ ೩೦ರ ಒಳಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ಸದಸ್ಯ ಸರ್ದಾರ್ ಅಹಮದ್ ಮಾತನಾಡಿ, ಗುಂಡೂರಾವ್ ಬಡಾವಣೆಯಲ್ಲಿ ಅಭಿವೃದ್ಧಿ ಕೆಲಸಗಳ ಕಾಮಗಾರಿಗಳು ನಡೆಯುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ, ಗುಂಡೂರಾವ್ ಬಡಾವಣೆಯ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿಪಡಿಸಬೇಕು. ತಕ್ಷಣ ಈ ಕೆಲಸಕ್ಕೆ ಅನುಮೋದನೆ ಕೊಡಬೇಕೆಂದು ಹಾಗೂ ಕುಡಿಯುವ ನೀರು, ಸಮರ್ಪಕ ನಿರ್ವಹಣೆಯಾಗಬೇಕು, ಚರಂಡಿ ಸ್ವಚ್ಛತೆ ಕಡೆ ಗಮನ ಹರಿಸಬೇಕು ಎಂದರು. ಸದಸ್ಯ ಎಸ್.ಸಿ. ಶರತ್ ಶೇಖರ್ ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ಹೆಚ್ಚಿನ ಕೆಲಸ ಮಾಡಿಸಲು ಅಧ್ಯಕ್ಷರು ಹಾಗೂ ಪಿಡಿಓ ಗಮನಹರಿಸಬೇಕು ಎಂದರು. ಅಕ್ರಮ ಕಟ್ಟಡಗಳ ವಿವರ ಸಂಗ್ರಹಿಸಿ, ಪಂಚಾಯಿತಿಯ ಗಮನಕ್ಕೆ ತರದೆ, ಕಟ್ಟಡ ಕಟ್ಟಿರುವವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಿಡಿಓ ಅವರನ್ನು ಪ್ರಶ್ನಿಸಿದರು. ಸಂಬAಧಪಟ್ಟವರಿಗೆ ನೋಟೀಸ್ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್.ಆರ್. ಮಧು, ಸದ್ಯರಾದ ಕಾವೇರಿ, ಸರಸ್ವತಿ, ಫರ್ಜಾನ ಶಾಹಿದ್, ಎಸ್.ಎನ್. ರಘು, ಸರ್ದಾರ್ ಅಹಮದ್, ಎಸ್.ಸಿ. ಶರತ್ಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಕಂಪ್ಯೂಟರ್ ನಿರ್ವಾಹಕರಾದ ಫೌಜಿಯಾ, ಲೀಲಾ ಉಪಸ್ಥಿತರಿದ್ದು, ತಮ್ಮಯ್ಯಾಚಾರ್ ಸ್ವಾಗತಿಸಿ, ವಂದಿಸಿದರು.